ordeal ಆರ್ಡೀಲ್‍
ನಾಮವಾಚಕ
  1. ದಿವ್ಯ; ತಪ್ಪಿತಸ್ಥನೆಂಬ ಶಂಕೆಗೊಳಪಟ್ಟವನು ಅಪರಾಧಿಯೆ ಅಲ್ಲವೆ ಎಂಬುದನ್ನು ನಿರ್ಣಯಿಸಲು ಪೂರ್ವದಲ್ಲಿ ರೂಢಿಯಲ್ಲಿದ್ದ (ಉದಾಹರಣೆಗೆ ಕುದಿಯುವ ನೀರಿನಲ್ಲಿ ಕೈ ಅದ್ದಿಸಿ ಅದು ಸುಡದಿದ್ದಲ್ಲಿ ಅವನು ನಿರಪರಾಧಿಯೆಂದು ದೇವರೇ ಯಾ ದೈವವೇ ತೀರ್ಮಾನಿಸಿತೆಂದು ಭಾವಿಸುತ್ತಿದ್ದ) ಉಗ್ರ ಪರೀಕ್ಷೆ.
  2. (ಶೀಲ, ಸಹನೆಗಳನ್ನು ತೀವ್ರವಾಗಿ) ಪರೀಕ್ಷಿಸುವ ಘಟನೆ, ಅನುಭವ; ಅಗ್ನಿಪರೀಕ್ಷೆ; ವಿಷಮ ಪರೀಕ್ಷೆ.
ಪದಗುಚ್ಛ

ordeal tree ಅಗ್ನಿಪರೀಕ್ಷೆ ಮರ, ವೃಕ್ಷ; ಹಿಂದೆ ಅಗ್ನಿಪರೀಕ್ಷೆಗಳಲ್ಲಿ ಬಳಸುತ್ತಿದ್ದ ಒಂದು ಬಗೆಯ ಮರ (ಈ ಮರದ ಹಣ್ಣು ವಿಷಪೂರಿತವಾಗಿದ್ದು ಅದನ್ನು ಅಗ್ನಿಪರೀಕ್ಷೆಗಳಲ್ಲಿ ಬಳಸುತ್ತಿದ್ದರು).