orchestra ಆರ್ಕಿಸ್ಟ್ರ
ನಾಮವಾಚಕ
  1. (ಪ್ರಾಚೀನ ಗ್ರೀಸಿನ ನಾಟಕಶಾಲೆಗಳಲ್ಲಿ ರಂಗದ ಮುಂಭಾಗದಲ್ಲಿ ಮೇಳದವರು ಹಾಡುತ್ತ ಕುಣಿಯುತ್ತಿದ್ದ) ಅರ್ಧ ವೃತ್ತಾಕಾರದ ಮೇಳರಂಗ.
  2. (ಆಧುನಿಕ ನಾಟಕ ಯಾ ಸಂಗೀತ ಶಾಲೆಗಳಲ್ಲಿ) ವಾದ್ಯಾಂಗಣ ಯಾ ಮೇಳಾಂಗಣ.
  3. ಆರ್ಕೆಸ್ಟ್ರ; ವಾದ್ಯವೃಂದ; ವಾದ್ಯಗೋಷ್ಠಿ; ವಾದ್ಯಮೇಳ, ಸಾಮಾನ್ಯವಾಗಿ ತಂತಿ ಮತ್ತು ತಾಲವಾದನಕಾರರ ದೊಡ್ಡ ತಂಡ.
  4. (ಅಮೆರಿಕನ್‍ ಪ್ರಯೋಗ) ನಾಟಕಶಾಲೆಯ, ಮುಖ್ಯವಾಗಿ ನೆಲದಂತಸ್ತಿನಲ್ಲಿರುವ, ಆಸನ ಪಂಕ್ತಿ, ಆಸನಗಳ ಒಂದು ತಂಡ.
  5. = orchestra pit.