oratory ಆರಟರಿ
ನಾಮವಾಚಕ
(ಬಹುವಚನ oratories).
  1. (Oratory) (ಕ್ರೈಸ್ತ) (ಏಕಾಂತ ಪೂಜೆಗಾಗಿ ರಚಿಸಿರುವ) ಸಣ್ಣ ಪೂಜಾಮಂದಿರ; ಏಕಾಂತ ಪೂಜಾಗೃಹ.
  2. (Oratory)
    1. (ಯಾವ ವ್ರತಗಳನ್ನೂ ತಳೆಯದೆ, ಜನತೆಗಾಗಿ ಸರಳೋಪದೇಶಗಳನ್ನು ಮಾಡುತ್ತ ಸರಳ ಪೂಜಾವಿಧಿಗಳನ್ನು ಕೈಗೊಳ್ಳುತ್ತಿದ್ದ, 1564ರಲ್ಲಿ ರೋಂನಲ್ಲಿ ಸ್ಥಾಪಿತವಾದ) ರೋಮನ್‍ ಕ್ಯಾಥೊಲಿಕ್‍ ಪಾದ್ರಿಗಳ ಸಂಘ, ಅರೇಟರಿ ಸಂಘ.
    2. ಇಂಗ್ಲೆಂಡ್‍ ಮೊದಲಾದವುಗಳಲ್ಲಿನ ಇದರ ಶಾಖೆ.
  3. ಭಾಷಣ.
  4. ಭಾಷಣ ಕಲೆ.
  5. ವಾಗ್ಮಿತೆ; ವಾಕ್ಪುಟುತ್ವ; ವಾಗ್ದಾರೆ; ವಾಗ್ದೋರಣೆ; ವಾಗ್ಝರಿ.
  6. ವಾಗಾಡಂಬರದ ನಿರೂಪಣೆ; ಅಲಂಕಾರಮಯವಾಗಿ ಆಡಂಬರದ ಹಾಗೂ ಉತ್ಪ್ರೇಕ್ಷಾಮಯ ಶೈಲಿಯಲ್ಲಿ ವಿಷಯದ ನಿರೂಪಣೆ.