oration ಓ(ಅ)ರೇಷನ್‍
ನಾಮವಾಚಕ
  1. (ಮುಖ್ಯವಾಗಿ ಒಂದು ಸಮಾರಂಭದಲ್ಲಿ ಮಾಡುವ ವಿಧ್ಯುಕ್ತ ಸ್ವರೂಪದ) ಭಾಷಣ; ಉಪನ್ಯಾಸ; ಪ್ರವಚನ.
  2. (ವ್ಯಾಕರಣ)
    1. ಭಾಷಣ; ಭಾಷಣದ ರೀತಿ: direct oration ಪ್ರತ್ಯಕ್ಷ ಕಥನ; ಭಾಷಣದ (ನಡೆದಂತೆಯೇ, ಪದಗಳ ಬದಲಾವಣೆಯಿಲ್ಲದೆ ಮಾಡಿದ) ವರದಿ. indirect oration ಪರೋಕ್ಷ ಕಥನ; (ನಡೆದ ಭಾಷಣವನ್ನು ವರದಿಗಾರನು ತನ್ನ ಮಾತುಗಳನ್ನಾಗಿ ಮಾಡಿಕೊಂಡು ವರದಿ ಮಾಡಿದ) ಭಾಷಣದ ಪರೋಕ್ಷ ವರದಿ.
    2. ಭಾಷೆ; ಮಾತು.