oracle ಆರಕ್‍ಲ್‍
ನಾಮವಾಚಕ
  1. ಪ್ರಶ್ನಸ್ಥಾನ; ದೇವವಾಣಿಯ ಕ್ಷೇತ್ರ; ನಿಮಿತ್ತ(ಕೇಳುವ) ಸ್ಥಾನ; ಪ್ರಾಚೀನ ಕಾಲದಲ್ಲಿ ಗ್ರೀಕರು ಮೊದಲಾದವರು ತಮ್ಮ ತಮ್ಮ ದೇವತೆಗಳನ್ನು ಸಲಹೆಗಾಗಿ ಯಾ ಭವಿಷ್ಯ ವಚನಕ್ಕಾಗಿ ಕೋರುತ್ತಿದ್ದ ಸ್ಥಳ.
  2. ದೇವವಾಣಿ; ನಿಮಿತ್ತ; ಪ್ರಶ್ನೆಯೊಂದಕ್ಕೆ ದೇವವಾಣಿಯ ಕ್ಷೇತ್ರದಿಂದ ಅರ್ಚಕನ(ಳ) ಮೂಲಕ ಬಂದ (ಸಾಮಾನ್ಯವಾಗಿ ಸಂದಿಗ್ಧ ಯಾ ಅಸ್ಪಷ್ಟ) ನುಡಿ, ಉತ್ತರ.
  3. ಯೆಹೂದ್ಯ ದೇವಾಲಯದ ಗರ್ಭಗುಡಿ ಯಾ ದೇವರ ಪೀಠ.
  4. ದೈವೀಸ್ಫೂರ್ತಿ; ದೇವಾವೇಶ ಯಾ ದೇವವಾಣಿ.
  5. ಪಾತ್ರಿ; ಪ್ರವಾದಿ; ದೇವವಾಣಿಯ ಕ್ಷೇತ್ರದಲ್ಲಿ ದೇವಾವೇಶದ ಯಾ ದೇವವಾಣಿಯ (ಮನುಷ್ಯನ ಯಾ ಇತರ ರೂಪದ) ಸಾಧನ, ಮಾಧ್ಯಮ, ವಾಹಕ.
  6. ಅಮೋಘ ನಿರ್ದೇಶಕ, ಮಾರ್ಗದರ್ಶಕ; ವಿಫಲವೇ ಆಗದಂತಹ ನಿರ್ದೇಶನ ಕೊಡುವ ವ್ಯಕ್ತಿ: I am Sir Oracle ನಾನೊಬ್ಬ ಅಮೋಘ ಮಾರ್ಗದರ್ಶಕ.
  7. ಭವಿಷ್ಯ; ತಪ್ಪಾಗದ ಮಾರ್ಗದರ್ಶನ ನೀಡುವ ಉಕ್ತಿ, ವಚನ, ಮೊದಲಾದವು.
  8. ತುಂಬು ವಿವೇಕದ ಯಾ ಬಹಳ ಗಂಭೀರವಾದ ಯಾ ಪರಿಣಾಮಕಾರಿಯಾದ ಅಭಿಪ್ರಾಯಗಳನ್ನು ಅಧಿಕಾರವಾಣಿಯಿಂದ ತಿಳಿಸುವ ವ್ಯಕ್ತಿ.
  9. (Oracle) Proprietary name ಇಂಡಿಪೆಂಡೆಂಟ್‍ ಟೆಲಿವಿಷನ್‍ ಸಂಸ್ಥೆಯ ಒದಗಿಸುವ ‘ಟೆಲಿಟೆಕ್ಸ್ಟ್‍’ (teletext) ಸೇವೆ.