option ಆಪ್ಷನ್‍
ನಾಮವಾಚಕ
  1. ಆಯ್ಕೆ; ಆಯುವುದು.
  2. ಆಯ್ದದ್ದು ಯಾ ಆಯಬಹುದಾದದ್ದು: make one’s option ತನ್ನ ಆಯ್ಕೆಯನ್ನು ಮಾಡು.
  3. ಆಯ್ಕೆಯ ಸ್ವಾತಂತ್ರ್ಯ.
  4. (ಸರಕಾರದ ಸಾಲಪತ್ರ, ಪತ್ರ ವ್ಯಾಪಾರ ಕಟ್ಟೆ, ಮೊದಲಾದವುಗಳ ವಿಷಯದಲ್ಲಿ) ಗೊತ್ತಾದ ಬಂಡವಾಳಪತ್ರ ಮೊದಲಾದವನ್ನು ಗೊತ್ತಾದ ಕಾಲದಲ್ಲಿ, ಗೊತ್ತಾದ ಬೆಲೆಗೆ, ತರಿಸಿಕೊಳ್ಳಲು ಯಾ ಬಟವಾಡೆ (ಪಾವತಿ) ಮಾಡಲು, ಹಣಕೊಟ್ಟು ಪಡೆದ ಹಕ್ಕು.
ಪದಗುಚ್ಛ
  1. have no option but to ಬೇರೆ ಮಾರ್ಗವಿಲ್ಲದಿರು; ಗತ್ಯಂತರವಿಲ್ಲದಿರು.
  2. keep (or leave) one’s options open ಯಾವುದಕ್ಕೂ ಬದ್ಧನಾಗದಿರು; ಮಾಡಲು ಯಾ ಮಾಡದಿರಲು ಸ್ವತಂತ್ರನಾಗಿರು.