optimism ಆಪ್ಟಿಮಿಸಮ್‍
ನಾಮವಾಚಕ
  1. ಪ್ರಪಂಚ ಶ್ರೇಷ್ಠತಾವಾದ; ವಾಸ್ತವಿಕ ಪ್ರಪಂಚವೇ (ಇಹಲೋಕವೇ) ಇತರ ಎಲ್ಲ ಸಾಧ್ಯವಿರಬಹುದಾದ ಪ್ರಪಂಚಗಳಿಗಿಂತಲೂ ಶ್ರೇಷ್ಠವಾದದ್ದೆಂಬ, ಮುಖ್ಯವಾಗಿ ಲೈಬ್ನಿಟ್ಸ್‍ ಎಂಬ ತತ್ತ್ವಜ್ಞಾನಿಯು ಪ್ರತಿಪಾದಿಸಿದ ಸಿದ್ಧಾಂತ.
  2. ಸರ್ವಶುಭವಾದ; ವಿಶ್ವದಲ್ಲಿ ಒಳಿತು ಕೆಡುಕನ್ನು ಅಂತಿಮವಾಗಿ ಜಯಿಸಲೇಬೇಕೆಂಬ ದೃಷ್ಟಿ, ವಾದ.
  3. ಆಶಾವಾದ; ಆಶಾವಾದಿತ್ವ; ಗೆಲವುನೋಟ; ಶುಭಪ್ರತೀಕ್ಷೆ; ಒಳ್ಳೆಯದನ್ನೇ ಭಾವಿಸುವ, ನಿರೀಕ್ಷಿಸುವ ಪ್ರವೃತ್ತಿ.