oppression ಅಪ್ರೆಷನ್‍
ನಾಮವಾಚಕ
  1. ದಬ್ಬಾಳಿಕೆ; ಅಧಿಕಾರದ ಯಾ ಶಕ್ತಿಯ ಕ್ರೂರ ಯಾ ಅನ್ಯಾಯವಾದ ಪ್ರಯೋಗ.
  2. ದಬ್ಬಾಳಿಕೆಯ ಕಾರ್ಯ ಯಾ ದೃಷ್ಟಾಂತ; ಹಿಂಸೆ; ಪೀಡನೆ; ಕ್ರೌರ್ಯ.
  3. ಪೀಡನೆ; ದಬ್ಬಾಳಿಕೆಗೆ ಗುರಿಯಾದ ಸ್ಥಿತಿ.
  4. ದೈಹಿಕ ಶಕ್ತಿಯನ್ನು ಯಾ ಮನಸ್ಸನ್ನು ಕುಗ್ಗಿಸುವ ಭಾವನೆ; (ಮನಸ್ಸಿನ ಮೇಲಿನ) ಭಾರ, ಹೊರೆ.