oppress ಅಪ್ರೆಸ್‍
ಸಕರ್ಮಕ ಕ್ರಿಯಾಪದ
  1. (ಹೆಚ್ಚಾದ ಭಾರದಿಂದ ಯಾ ಸಂಖ್ಯೆಯಿಂದ ಯಾ ಎದುರಿಸಲಾಗದ ಶಕ್ತಿಯಿಂದ) ಅದುಮು; ತುಳಿ; ದಮನ ಮಾಡು; ತಲೆ ಎತ್ತದಂತೆ ಮಾಡು.
  2. (ಉತ್ಸಾಹ, ಮನಸ್ಸು, ಕಲ್ಪನೆ, ಮೊದಲಾದವನ್ನು ಚಿಂತೆ ಯಾ ದುಃಖದಿಂದ) ಕುಗ್ಗಿಸು; ಜಗ್ಗಿಸು; ತುಳಿ: care and sorrow oppressed them ಚಿಂತೆ ಶೋಕಗಳು ಅವರನ್ನು ಕುಗ್ಗಿಸಿದವು.
  3. (ಮನಸ್ಸಿಗೆ) ಭಾರವಾಗಿರು; ಹೊರೆಯಾಗಿರು.
  4. ದಬ್ಬಾಳಿಕೆಯಿಂದ ಆಳು, ಅಧಿಕಾರ ಮಾಡು, ರಾಜ್ಯಬಾರ ನಡೆಸು.
  5. ಬಲವಂತದಿಂದ ಅದುಮಿಡು; ದಬಾವಣೆ ನಡೆಸು; ಬಲಾತ್ಕಾರದಿಂದ ಸ್ವಾಧೀನದಲ್ಲಿಟ್ಟುಕೊ.
  6. ಪೀಡಿಸು; ಗೋಳುಗುಟ್ಟಿಸು; ಕಾಡು; ಹಿಂಸಿಸು; ಎಡೆಬಿಡದ ಕ್ರೌರ್ಯಕ್ಕೆ ಯಾ ಅನ್ಯಾಯಕ್ಕೆ ಗುರಿ ಮಾಡು: a people oppressed by despotism ದಬ್ಬಾಳಿಕೆಯಿಂದ ಪೀಡಿಸಲ್ಪಟ್ಟ (ಹಿಂಸೆಗೆ ಗುರಿಯಾದ) ಜನ.