opposition ಆಪಸಿಷನ್‍
ನಾಮವಾಚಕ
  1. ಎದುರುಬದುರಾಗಿ, ಅಭಿಮುಖವಾಗಿ–ಇಡುವುದು: opposition of the thumb ಹೆಬ್ಬೆಟ್ಟಿಗೆ ಎದುರುಬದುರಾಗಿಡುವುದು.
  2. (ಖಗೋಳ ವಿಜ್ಞಾನ ಮತ್ತು ಜ್ಯೋತಿಷ) ಪ್ರತಿಯೋಗ; ನೇರಿದಿರು ಸ್ಥಾನ; ಭೂಮಿಯಿಂದ ನೋಡಿದಾಗ, ಎರಡು ಆಕಾಶಕಾಯಗಳ ರೇಖಾಂಶವು $180^{\circ}$ ವ್ಯತ್ಯಾಸವಾಗಿರುವಾಗ ಅವುಗಳ ಸ್ಥಾನ: planet is in opposition ಗ್ರಹವು (ಸೂರ್ಯನಿಗೆ) ಪ್ರತಿಯೋಗದಲ್ಲಿದೆ, ಎದುರಾಗಿದೆ.
  3. ಪರಸ್ಪರ ಭಿನ್ನತೆ; ವೈದೃಶ್ಯ; ವಿರೋಧ; ವಿರೋಧ ನ್ಯಾಸ.
  4. (ತರ್ಕಶಾಸ್ತ್ರ) ಒಂದೇ ಕರ್ತೃ ಕ್ರಿಯಾಪದಗಳಿರುವ, ಆದರೆ ಪ್ರಮಾಣದಲ್ಲಾಗಲಿ ಗುಣದಲ್ಲಾಗಲಿ ಯಾ ಎರಡರಲ್ಲೂ ವ್ಯತ್ಯಾಸವುಳ್ಳ ಎರಡು ಪ್ರತಿಜ್ಞಾ ವಾಕ್ಯಗಳಿಗೆ ಇರುವ ಸಂಬಂಧ; ವಿರೋಧಸಂಬಂಧ.
  5. ವಿರೋಧ; ಪ್ರತಿಭಟನೆ; ಪ್ರತಿರೋಧ: did it in opposition to public opinion ಜನಾಭಿಪ್ರಾಯಕ್ಕೆ ವಿರೋಧವಾಗಿ ಅದನ್ನು ಮಾಡಿದನು.
  6. (ಬ್ರಿಟಿಷ್‍ ಪ್ರಯೋಗ) ವಿರೋಧಪಕ್ಷ; ಪ್ರತಿಪಕ್ಷ: in opposition ವಿರೋಧ ಪಕ್ಷದಲ್ಲಿ. was in opposition at the time ಆ ಕಾಲದಲ್ಲಿ ವಿರೋಧಪಕ್ಷದಲ್ಲಿದ್ದನು. from the Opposition benches ವಿರೋಧಪಕ್ಷದ ಆಸನಗಳಿಂದ.
  7. (ಒಂದು ಸೂಚನೆಯನ್ನು) ವಿರೋಧಿಸುವ ಪಕ್ಷ.
  8. ಎದುರಾಳಿಗಳು; ಪ್ರತಿಸ್ಪರ್ಧಿಗಳು.
ಪದಗುಚ್ಛ
  1. Her Majesty’s Opposition (ಬ್ರಿಟಿಷ್‍ ಪ್ರಯೋಗ) = ಪದಗುಚ್ಛ\((4)\).
  2. in opposition (ಗ್ರಹದ ವಿಷಯದಲ್ಲಿ) ಸೂರ್ಯನಿಗೆ ಎದುರಾಗಿ, ಅಭಿಮುಖವಾಗಿ.
  3. the Leader of the Opposition ವಿರೋಧ ಪಕ್ಷದ ನಾಯಕ.
  4. the Opposition (ಆಡಳಿತ ಪಕ್ಷದ) ಎದುರು ಪಕ್ಷ; ವಿರೋಧ ಪಕ್ಷ.
  5. the Opposition whips ವಿರೋಧ ಪಕ್ಷದ ಶಿಸ್ತು ನಿರೂಪಗಳು.