oppose ಅಪೋಸ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು, ವ್ಯಕ್ತಿಯನ್ನು) ತಡೆಯಾಗಿ, ವಿರೋಧಿಯಾಗಿ, ಪ್ರತಿಭಾರವಾಗಿ, ಪ್ರತಿದ್ವಂದ್ವಿಯಾಗಿ, ವೈದೃಶ್ಯ ತೋರುವಂತೆ–ಇಡು, ಒಡ್ಡು, ಹೇಳು; ಮಾರೊಡ್ಡು; ಎದುರುಬದುರಾಗಿಡು; ಮುಖಾಮುಖಿಯಾಗಿಡು: to fury let us oppose patience ರೋಷಕ್ಕೆ ಎದುರಾಗಿ ತಾಳ್ಮೆಯನ್ನು ಒಡ್ಡೋಣ; ರೋಷವನ್ನು ತಾಳ್ಮೆಯಿಂದ ಎದುರಿಸೋಣ. to Plato I oppose Aristotle ಪ್ಲೇಟೋ ವಿರುದ್ಧ ಅರಿಸ್ಟಾಟಲನನ್ನು ಎದುರೊಡ್ಡುತ್ತೇನೆ, ಪ್ರತಿದ್ವಂದ್ವಿಯಾಗಿಡುತ್ತೇನೆ. the thumb can be opposed to any of the fingers ಹೆಬ್ಬೆಟ್ಟನ್ನು ಯಾವ ಬೆರಳಿಗಾದರೂ ಎದುರುಬದುರು ಮಾಡಬಹುದು.
  2. ವಸ್ತುಗಳನ್ನು ವಿರೋಧಾತ್ಮಕವಾಗಿ ನಿರೂಪಿಸು; ಪರಸ್ಪರ ವಿರೋಧಭಾವದಲ್ಲಿ ತಿಳಿಸು, ತೋರಿಸು.
  3. (ವ್ಯಕ್ತಿಯನ್ನು, ವಸ್ತುವನ್ನು) ವಿರೋಧಿಸು; ಎದುರಿಸು; ಎದುರಾಗಿ ನಿಲ್ಲು; ವಿರುದ್ಧ ಹೋರಾಡು: oppose the government ಸರ್ಕಾರವನ್ನು ಎದುರಿಸು; ಸರ್ಕಾರದ ವಿರುದ್ಧ ಹೋರಾಡು.
  4. ಅಡ್ಡಿ ಮಾಡು; ತಡೆಯೊಡ್ಡು.
  5. (ನಿರ್ಣಯ, ಮಸೂದೆ, ಅರ್ಜಿ, ಮೊದಲಾದವನ್ನು) ವಿರೋಧಿಸು; ತಳ್ಳಿಹಾಕಬೇಕೆಂದು ಸೂಚಿಸು.
  6. (ಭೂತಕೃದಂತದಲ್ಲಿ) ವಿರುದ್ಧ; ವ್ಯತಿರಿಕ್ತ; ವೈದೃಶ್ಯವಿರುವ: characters strongly opposed ಬಹು ವ್ಯತಿರಿಕ್ತವಾದ ಪಾತ್ರಗಳು (ಸ್ವಭಾವಗಳು).
  7. (ಭೂತಕೃದಂತ) (ವ್ಯಕ್ತಿಗಳ ವಿಷಯದಲ್ಲಿ) ವಿರುದ್ಧ; ವ್ಯತಿರಿಕ್ತ; ಪ್ರತಿಕೂಲ: is firmly opposed to protection ರಕ್ಷಣೆಗೆ ದೃಢ ವಿರೋಧಿಯಾಗಿದ್ದಾನೆ.
ಅಕರ್ಮಕ ಕ್ರಿಯಾಪದ

ವಿರೋಧಿಯಾಗಿ ಯಾ ತಡೆಯಾಗಿ ವರ್ತಿಸು: it is the duty of an opposition to oppose ವಿರೋಧಿಸುವುದು ವಿರೋಧಪಕ್ಷದ ಕರ್ತವ್ಯ.

ಪದಗುಚ್ಛ

as opposed to ಅದಕ್ಕೆ ಪ್ರತಿಯಾಗಿ; ತದ್ವಿರುದ್ಧವಾಗಿ.