opportunism ಆಪರ್ಟ್ಯೂನಿಸಮ್‍
ನಾಮವಾಚಕ
  1. ಸಮಯಾನುವರ್ತನೆ; ಸಮಯಸಾಧಕತೆ; ಕಾರ್ಯನೀತಿಯನ್ನು ನಿರ್ಧರಿಸುವಲ್ಲಿ ಆಯಾ ಸಮಯ, ಸಂದರ್ಭಗಳಿಗೆ ಯುಕ್ತವಾದ ಯಾ ಮಿತಿಮೀರಿದ ಪ್ರಾಶಸ್ತ್ಯ ಕೊಡುವುದು.
  2. ಮಾಡಬೇಕಾದುದಕ್ಕಿಂತ ಮಾಡಲು ಸಾಧ್ಯವಾಗುವುದಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವುದು.
  3. ಮಧ್ಯಸ್ಥಿಕೆ; ರಾಜಿ.
  4. (ರಾಜಕೀಯದಲ್ಲಿ) ವ್ಯಾವಹಾರಿಕತೆ; ಕಾರ್ಯಸಾಧ್ಯ ವ್ಯವಹಾರ.
  5. ಅನುಕೂಲಸಿಂಧುತ್ವ; ಅನುಕೂಲ ವರ್ತನೆ; ತತ್ತ್ವಕ್ಕಿಂತ ಸ್ವಾನುಕೂಲಕ್ಕೆ, ಅಧಿಕಾರಕ್ಕಿಂತ ಸ್ಥಾನಕ್ಕೆ ಹೆಚ್ಚು ಬೆಲೆ ಕೊಡುವುದು.
  6. ರಾಜಕೀಯದಲ್ಲಿ ಮರ್ಜಿ ಅನುಸರಣೆ; ಮರ್ಜಿ ಕಾಯುವುದು; ಸಮಯಾನುವರ್ತನೆ; ಸ್ವಾರ್ಥ ಸಾಧನೆ.
  7. ಅವಕಾಶಗ್ರಹಣ; ಸಿಕ್ಕಿದ ಅವಕಾಶಗಳನ್ನು, ಅನುಕೂಲ ಸಂದರ್ಭಗಳನ್ನು ಹಿಡಿದುಕೊಳ್ಳುವುದು, ಬಳಸಿಕೊಳ್ಳುವುದು.