opinion ಆಪಿನ್ಯನ್‍
ನಾಮವಾಚಕ
  1. ಅಭಿಪ್ರಾಯ: in my opinion ನನ್ನ ಅಭಿಪ್ರಾಯದಲ್ಲಿ; ನನಗೆ ತೋರುವುದರಲ್ಲಿ.
  2. ಸದ್ಯದ ನಂಬಿಕೆ: am of opinion that ಈ ರೀತಿಯಾಗಿ ಸದ್ಯದಲ್ಲಿ ನಂಬಿದ್ದೇನೆ.
  3. ಎಣಿಕೆ; ತೋಚಿಕೆ; ಅನಿಸಿಕೆ.
  4. ಜನಾಭಿಪ್ರಾಯ; ಲೋಕಾಭಿಪ್ರಾಯ; ಲೋಕಮತ; ಜನಸಾಮಾನ್ಯರಲ್ಲಿ ರೂಢಿಯಾಗಿರುವ, (ಮುಖ್ಯವಾಗಿ ನೈತಿಕ ಪ್ರಶ್ನೆಗಳನ್ನು ಕುರಿತ) ಭಾವನೆ ಯಾ ಅಭಿಪ್ರಾಯ.
  5. (ನಿರ್ದಿಷ್ಟ ಪ್ರಶ್ನೆಯ ಬಗ್ಗೆ ಒಬ್ಬನ) ಆಲೋಚನೆ; ದೃಢಾಭಿಪ್ರಾಯ; ದೃಢ ನಂಬಿಕೆ: my opinion on smoking ಧೂಮಪಾನದ ಬಗ್ಗೆ ನನ್ನ ಅಭಿಪ್ರಾಯ, ಆಲೋಚನೆ.
  6. (ವಾಸ್ತವಾಂಶ ಯಾ ಸರಿಯಾದ ಕ್ರಮ ಹೀಗೆಂದು ಸಲಹೆ ಕೇಳಿದಾಗ ನೀಡುವ) ತಜ್ಞಾಭಿಪ್ರಾಯ; ತಜ್ಞ ಸಲಹೆ; ತಜ್ಞನ, ಪರಿಣತನ–ವಿಧಿವತ್ತಾದ ಹೇಳಿಕೆ; ವೃತ್ತಿ ನಿಪುಣನ ಅಭಿಪ್ರಾಯ: you had better have another opinion ನೀನು ಮತ್ತೊಬ್ಬ ತಜ್ಞನ ಸಲಹೆಯನ್ನು ಪಡೆಯುವುದು ಮೇಲು.
  7. ಎಣಿಕೆ; ಅಭಿಪ್ರಾಯ: have a very high opinion of him ಅವನ ಬಗ್ಗೆ ನನಗೆ ಬಹಳ ಒಳ್ಳೆಯ ಅಭಿಪ್ರಾಯವಿದೆ.
  8. (ನಿಷೇಧಪದದೊಡನೆ) ಸದಭಿಪ್ರಾಯ; ಒಳ್ಳೆಯ ಅಭಿಪ್ರಾಯ; ಮೆಚ್ಚಿಕೆ ತೋರಿಸುವ ಅಭಿಪ್ರಾಯ: I have no opinion of Frenchmen ಹ್ರೆಂಚ್‍ ಜನರ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ.
  9. (ನ್ಯಾಯಶಾಸ್ತ್ರ) ಕಾರಣ–ನಿರ್ದೇಶ, ನಿರೂಪಣ; ತೀರ್ಪಿಗೆ ಆಧಾರವಾದ ಕಾರಣಗಳನ್ನು ತಿಳಿಸುವ ವಿದ್ಯುಕ್ತ ಹೇಳಿಕೆ.
ಪದಗುಚ್ಛ
  1. act up to one’s opinions ತನ್ನ ದೃಢಾಭಿಪ್ರಾಯಗಳಿಗೆ ಅನುಸಾರವಾಗಿ ನಡೆ.
  2. a matter of opinion ಅಭಿಪ್ರಾಯದ, ಭಿನ್ನಾಭಿಪ್ರಾಯದ ವಿಷಯ.
  3. be of the opinion ಹಾಗೆಂದು ಅಭಿಪ್ರಾಯಪಡು, ನಂಬು.
  4. in one’s opinion ಒಬ್ಬನ ಅಭಿಪ್ರಾಯದಲ್ಲಿ, ನಂಬಿಕೆಯಲ್ಲಿ.
  5. the courage of one’s opinions ಅಭಿಪ್ರಾಯ ಧೈರ್ಯ; ತನ್ನ ದೃಢನಂಬಿಕೆಗಳಂತೆ ನಡೆಯುವ ಧೈರ್ಯ.