operculum ಅಪರ್ಕ್ಯುಲಮ್‍
ನಾಮವಾಚಕ
  1. (ಬಹುವಚನ opercula ಉಚ್ಚಾರಣೆ ಅಪರ್ಕ್ಯುಲ). ಮುಚ್ಚಳ; ಹೊದಿಕೆ; ಕವಾಟ ; ಪಿಧಾನ:
    1. (ಪ್ರಾಣಿವಿಜ್ಞಾನ) ಮೀನಿನ ಕಿವಿರುಗಳನ್ನು ಮುಚ್ಚಿರುವ ಹೊದಿಕೆ.
    2. (ಪ್ರಾಣಿವಿಜ್ಞಾನ) ಚಿಪ್ಪು ಜೀವಿ ತನ್ನ ಚಿಪ್ಪಿನಲ್ಲಿ ಅಡಗಿಕೊಂಡಾಗ ಚಿಪ್ಪಿನ ತೂತನ್ನು ಮುಚ್ಚುವ ಹಾಳೆ.
    3. ತೂತೊಂದನ್ನು ಮುಚ್ಚುವ, ಉದಾಹರಣೆಗೆ ಕೆಲವು ಹಕ್ಕಿಗಳ ಮೂಗಿನ ಹೊಳ್ಳೆಗಳ ಮೇಲಿನ ಚರ್ಮದ ಪದರದಂಥ, ಯಾವುದೇ ವಿವಿಧ ಭಾಗಗಳು.
  2. (ಸಸ್ಯವಿಜ್ಞಾನ) ಹಾವಸೆಗಳ ಬೀಜಕಣಕೋಶದ ಮೇಲಿರುವ ಮುಚ್ಚಳ.