operator ಆಪರೇಟರ್‍
ನಾಮವಾಚಕ
  1. ಚಾಲಕ; ನಡೆಸುವವ; ಯಂತ್ರದ, ಉಪಕರಣದ ಯಾ ಅಂಥದೇ ಸಲಕರಣೆಯ ಚಾಲಕ.
  2. (ಮುಖ್ಯವಾಗಿ) ಟೆಲಿಹೋನ್‍ ಚಾಲಕ(ಕಿ); ದೂರವಾಣಿಯ ಕೇಂದ್ರದಲ್ಲಿ ದೂರವಾಣಿಗಳ ಸಂಪರ್ಕ ಕಲ್ಪಿಸುವವನು(ಳು) telegraph operator ಟೆಲಿಗ್ರಾಹ್‍ ಚಾಲಕ(ಕಿ).
  3. ನಿರ್ವಾಹಕ; ಯಾವುದೇ ಕೈಗಾರಿಕಾ ಸಂಸ್ಥೆ, ಉದ್ಯಮ ಯಾ ವ್ಯವಸ್ಥೆಯನ್ನು ನಿರ್ವಹಿಸುವವನು.
  4. (ಆಡುಮಾತು) ಕೆಲಸಗಾರ; ನಿರ್ವಾಹಕ; ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುವವನು: a smooth operator ಸುಸೂತ್ರ ಕೆಲಸಗಾರ; ಶಾಂತ ರೀತಿಯಲ್ಲಿ, ಗಲಾಟೆಯಿಲ್ಲದೆ ಕೆಲಸ ನಿರ್ವಹಿಸುವವ.
  5. (ಗಣಿತ) ಕ್ರಿಯಾಚಿಹ್ನೆ; ಗಣಿತಕ್ರಿಯೆಯನ್ನು ಸೂಚಿಸುವ $+,\times,\div$ ಮೊದಲಾದ ಯಾವುದೇ ಚಿಹ್ನೆ.
  6. ಹುಂಡಿ ವ್ಯಾಪಾರಿ; ಮುಖ್ಯವಾಗಿ ಸಟ್ಟಾ ಯಾ ದೊಡ್ಡ ಪ್ರಮಾಣದಲ್ಲಿ ಬಂಡವಾಳಪತ್ರಗಳ, ಹುಂಡಿಗಳ ವ್ಯಾಪಾರ ನಡಸುವವನು.
  7. ಶಸ್ತ್ರ–ವೈದ್ಯ, ಚಿಕಿತ್ಸಕ; ಶಸ್ತ್ರಚಿಕಿತ್ಸೆ ಮಾಡುವವನು.
  8. (ಅಶಿಷ್ಟ) ಜಾಣ; ಚತುರ; ಚಾಲಾಕಿ:
    1. ಸ್ವಕಾರ್ಯಸಾಧಕ; ಉಪಾಯಜ್ಞ; ಜಾಣತನ, ಮನವನ್ನೊಲಿಸಿಕೊಳ್ಳುವ ಮಾರ್ಗ, ಮೊದಲಾದವುಗಳಿಂದ ತನ್ನ ಉದ್ದೇಶಗಳನ್ನು ಸಾಧಿಸುವವನು.
    2. ಕಷ್ಟಗಳನ್ನು ಪರಿಹರಿಸಿಕೊಳ್ಳಲು ನಿಯಮಗಳನ್ನು ಯಾ ನಿರ್ಬಂಧಗಳನ್ನು ತಪ್ಪಿಸಿಕೊಳ್ಳುವುದರಲ್ಲಿ ಚಾಕಚಕ್ಯತೆ ತೋರಿಸುವವನು.
    3. ಭಾರೀ ಪ್ರಮಾಣದ ಹಣಕಾಸಿನ ವ್ಯವಹಾರದಲ್ಲಿ ಯಶಸ್ವಿಯಾಗಿರುವವನು.
    4. (ಗಂಡಸಾದರೆ) ಹೆಂಗಸರನ್ನು ಯಾ (ಹೆಂಗಸಾದರೆ) ಗಂಡಸರನ್ನು ಆಕರ್ಷಿಸುವುದರಲ್ಲಿ ಯಾ ಮೋಹಕವಾಗಿ ಒಲಿಸಿಕೊಳ್ಳುವುದರಲ್ಲಿ ಯಾ ಮೋಹಕವಾಗಿ ಒಲಿಸಿಕೊಳ್ಳುವುದರಲ್ಲಿ ನಿಪುಣ(ಣೆ).
    5. ನಯವಾಚಾಳಿ; ಜಾಣ ಮಾತುಗಾರ; ವಿವಿಧ ವಿಷಯಗಳನ್ನು ಕುರಿತು ಮನವೊಲಿಸಿಕೊಳ್ಳುವವನು.