See also 2operative
1operative ಆಪರಟಿವ್‍
ಗುಣವಾಚಕ
  1. ಕಾರ್ಯಕಾರಿಯಾದ; ಪರಿಣಾಮಕಾರಿಯಾದ.
  2. ಪ್ರಧಾನವಾದ; ಮುಖ್ಯವಾದ; ಮುಖ್ಯವಾಗಿ ಸಂಬಂಧಿಸಿದ: ‘may’ is the operative word. ‘may’ ಎಂಬುದು ಮುಖ್ಯವಾದ, ಮುಖ್ಯವಾಗಿ ಸಂಬಂಧಿಸಿದ ಪದ.
  3. ಶಸ್ತ್ರಚಿಕಿತ್ಸೆಯ; ಶಸ್ತ್ರಚಿಕಿತ್ಸೆಯಿಂದಾದ.
  4. (ನ್ಯಾಯಶಾಸ್ತ್ರ) ವ್ಯವಹಾರೋದ್ದೇಶದ; ವ್ಯವಹಾರವೊಂದನ್ನು ನಡೆಸುವ ಉದ್ದೇಶವನ್ನು ಪ್ರಕಟಿಸಿದ.
  5. ಪರಿಣಾಮವುಂಟುಮಾಡುವ.
  6. ಸಲ್ಲುವ; ಜಾರಿಯಲ್ಲಿರುವ.
  7. ವ್ಯಾವಹಾರಿಕ; ಪ್ರಾಯೋಗಿಕ; ಕಾರ್ಯರೂಪದ; ಕಾರ್ಯಾತ್ಮಕ (ತತ್ತ್ವಪ್ರಾಯವಾಗಿಯೋ ಚಿಂತನರೂಪದ್ದಾಗಿಯೋ ಅಲ್ಲದ): the operative part of the work ಕೆಲಸದ ವ್ಯಾವಹಾರಿಕ (ಕಾರ್ಯರೂಪದ) ಭಾಗ.
See also 1operative
2operative ಆಪರಟಿವ್‍
ನಾಮವಾಚಕ
  1. (ಮುಖ್ಯವಾಗಿ ನುರಿತ ಯಾ ತರಪೇತು ಪಡೆದ ಗಿರಣಿ) ಕೆಲಸಗಾರ; ಕಾರೇಗಾರ; ಕಾರ್ಮಿಕ.
  2. (ಅಮೆರಿಕನ್‍ ಪ್ರಯೋಗ) ಖಾಸಗಿ ಪತ್ತೇದಾರ.