operational ಆಪರೇಷನ(ನ್‍)ಲ್‍
ಗುಣವಾಚಕ
  1. ಕಾರ್ಯಕಾರಿ; ಕಾರ್ಯಮಾಡಬಲ್ಲ; ಉಪಯೋಗಿಸಬಲ್ಲ; ಕಾರ್ಯಸಮರ್ಥ; ಕಾರ್ಯಾತ್ಮಕ: how soon will the truck be operational ಟ್ರಕ್ಕು ಎಷ್ಟು ಬೇಗ, ಕೆಲಸಮಾಡಬಲ್ಲದ್ದಾಗುವುದು?
  2. ಕಾರ್ಯಕಾರಿ; ಕಾರ್ಯಸಿದ್ಧ; ಕಾರ್ಯಮಾಡಲು, ಕಾರ್ಯಕ್ಕೆ ತೊಡಗಲು–ಸಿದ್ಧವಾಗಿರುವ.
  3. (ಸೈನ್ಯ)
    1. ಸೇನಾ ಕಾರ್ಯಾಚರಣೆಯ; ಸೇನಾ ಕಾರ್ಯಾಚರಣೆಗೆ ಸಂಬಂಧಪಟ್ಟ; ಸೇನಾ ಕಾರ್ಯಾಚರಣೆಗಳಲ್ಲಿ ತೊಡಗಿರುವ; ಯುದ್ಧ ಕಾರ್ಯಾಚರಣೆಗಳಿಗೆ ಬಳಸುವ.
    2. ಕಾರ್ಯನಿರತ; ಸಮರಸೇವೆಯಲ್ಲಿರುವ; ಯುದ್ಧ ಕಾರ್ಯದ ಮೇಲಿನ; ಕದನ ನಡಸುತ್ತಿರುವ.
  4. ಕಾರ್ಯಸಂಬಂಧಿ; ಕಾರ್ಯಕ್ಕೆ, ಪ್ರಕ್ರಿಯೆಗೆ, ಕಾರ್ಯರೀತಿಗೆ, ಕಾರ್ಯ ನಿರ್ವಹಣೆಗೆ–ಸಂಬಂಧಪಟ್ಟ.