operation ಆಪರೇಷ(ಷ್‍)ನ್‍
ನಾಮವಾಚಕ
  1. ಕಾರ್ಯ; ಕ್ರಿಯೆ.
  2. ಕಾರ್ಯಾಚರಣೆ; ಕಾರ್ಯ–ನಿರ್ವಾಹ, ನಿರ್ವಹಣೆ, ನೆರವೇರಿಕೆ: not yet in operation ಇನ್ನೂ ಕಾರ್ಯಾಚರಣೆಯಲ್ಲಿಲ್ಲ.
  3. ಕಾರ್ಯಕಾರಿತ್ವ; ಪರಿಣಾಮಕಾರಿತ್ವ; ಒಂದು ವಸ್ತುವಿನ ಪರಿಣಾಮಕಾರಿತ್ವದ ವ್ಯಾಪ್ತಿ ಯಾ ಹರವು.
  4. ಪ್ರಕ್ರಿಯೆ; ಕಾರ್ಯ ಗತಿ, ರೀತಿ: the operation of breathing ಉಸಿರಾಡುವ ಪ್ರಕ್ರಿಯೆ.
  5. (ಮುಖ್ಯವಾಗಿ ಕ್ರಿಯಾಸರಣೆಯ) ಒಂದು ಕ್ರಿಯೆ (ಅನೇಕವೇಳೆ ಬಹುವಚನದಲ್ಲಿ ಪ್ರಯೋಗ): begin operations ಕಾರ್ಯಚರಣೆಗಳನ್ನು ಆರಂಭಿಸು.
  6. (ಶಸ್ತ್ರವೈದ್ಯ) ಶಸ್ತ್ರಕ್ರಿಯೆ; ಶಸ್ತ್ರಚಿಕಿತ್ಸೆ; (ಅಂಗವಿಕಾರ, ಗಾಯ, ವ್ಯಾಧಿ, ನೋವು, ಮೊದಲಾದವನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ವಾಸಿಮಾಡಲು) ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ.
  7. (ಸೈನ್ಯಪಡೆ, ಹಡಗುಗಳು, ಮೊದಲಾದವುಗಳ) ಯುದ್ಧತಂತ್ರದ–ಚಲನವಲನ, ಕಾರ್ಯಾಚರಣೆ: combined operation (ಭೂಸೈನ್ಯ, ನೌಕಾಸೈನ್ಯಗಳ) ಸಂಯುಕ್ತ ಚಲನವಲನ; ಜಂಟಿ ಕಾರ್ಯಾಚರಣೆ.
  8. [ಸಂಕೇತನಾಮ(code-name)ದ ಹಿಂದೆ ಬಳಸುವಲ್ಲಿ] ಕಾರ್ಯಾಚರಣೆ: Operation Bluestar.
  9. ಹಣಕಾಸಿನ–ವ್ಯವಹಾರ, ವಹಿವಾಟು, ಲೇವಾದೇವಿ.
  10. (ಗಣಿತ) ಕ್ರಿಯೆ; ಒಂದು ಸಂಖ್ಯೆ ಯಾ ಮೊತ್ತದ ಮೌಲ್ಯವನ್ನು ಬದಲಾಯಿಸುವಂತೆ ಅದಕ್ಕೆ ನಡೆಸುವ ಸಂಕಲನ, ಗುಣನ, ಮೊದಲಾದ ಯಾವುದೇ ಕ್ರಿಯೆ.
  11. ಚಾಲನೆ; ಜಾರಿ: comes into operation ಜಾರಿಗೆ ಬರುತ್ತದೆ.
  12. ಕೆಲಸ ಮಾಡುವ ಬಗೆ; ಕಾರ್ಯರೀತಿ; ಕ್ರಿಯಾವಿಧಾನ: its operation is easily explained ಅದರ ಕಾರ್ಯರೀತಿಯನ್ನು ಸುಲಭವಾಗಿ ವಿವರಿಸಬಹುದು.
  13. (ಕಾಲದ ಯಾ ವ್ಯಾಪ್ತಿಯ ವಿಷಯದಲ್ಲಿ) ಊರ್ಜಿತತ್ವ; ಮಾನ್ಯತೆ; ಬಳಕೆ; ರೂಢಿ: must extend its operation ಇನ್ನೂ ಹೆಚ್ಚು ಕಾಲ, ಯಾ ಇನ್ನೂ ವಿಶಾಲ ಕ್ಷೇತ್ರದಲ್ಲಿ ಅದರ ಬಳಕೆಯನ್ನು ವಿಸ್ತರಿಸಬೇಕು.
  14. ಕಾರ್ಯದ–ವ್ಯಾಪ್ತಿ, ಹರವು, ಅವಕಾಶ.
  15. ಚಟುವಟಿಕೆ.