operate ಆಪರೇಟ್‍
ಸಕರ್ಮಕ ಕ್ರಿಯಾಪದ
  1. ಆಗಿಸು; ಉಂಟುಮಾಡು; ನೆರವೇರಿಸು: energy operates changes ಶಕ್ತಿಯು ಬದಲಾವಣೆಗಳನ್ನುಂಟುಮಾಡುತ್ತದೆ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ನಿರ್ವಹಿಸು; ಕಾರ್ಯಮಾಡು; ನಡೆಸು: operate a press ಮುದ್ರಣಾಲಯವನ್ನು ನಡೆಸು.
ಅಕರ್ಮಕ ಕ್ರಿಯಾಪದ
  1. ಕಾರ್ಯ ನಡೆಸು; ಕೆಲಸಮಾಡು.
  2. ಪರಿಣಾಮವನ್ನುಂಟುಮಾಡು; ಪರಿಣಾಮ ತರು; ಫಲವುಂಟುಮಾಡು: the tax operates to our disadvantage ತೆರಿಗೆ ನಮಗೆ ಪ್ರತಿಕೂಲವಾದ ಪರಿಣಾಮವನ್ನುಂಟುಮಾಡುತ್ತದೆ.
  3. ಶಸ್ತ್ರಚಿಕಿತ್ಸೆ ಮಾಡು.
  4. (ಸೈನ್ಯ ಯಾ ನೌಕಾಸೈನ್ಯದ ವಿಷಯದಲ್ಲಿ) ಯುದ್ಧತಂತ್ರದ ಚಲನವಲನಗಳನ್ನು ನಡೆಸು.
  5. (ಮುಖ್ಯವಾಗಿ ಬಂಡವಾಳ ಪತ್ರಗಳ ದಲ್ಲಾಳಿ ಮೊದಲಾದವರ ವಿಷಯದಲ್ಲಿ) (ಮುಖ್ಯವಾಗಿ ಬೆಲೆಗಳ ಮೇಲೆ ಪರಿಣಾಮ ಬೀರುವ ಉದ್ದೇಶದಿಂದ) ಕೊಳ್ಳು ಯಾ ಮಾರು; ವ್ಯವಹಾರ ಮಾಡು; ವಹಿವಾಟು ನಡೆಸು.
  6. (ಭಾವನೆಗಳು ಮೊದಲಾದವುಗಳ ಮೇಲೆ) ಪ್ರಭಾವ ಬೀರು; ಪರಿಣಾಮ ಬೀರು.
  7. (ವ್ಯಕ್ತಿಯ ಹೆದರಿಕೆ ಮೊದಲಾದವನ್ನು ಕೆರಳಿಸಿ) ಕಾರ್ಯಭಾರ ನಡೆಸು.
  8. (ಔಷಧ ಮೊದಲಾದವುಗಳ ವಿಷಯದಲ್ಲಿ) ಅಪೇಕ್ಷಿಸಿದ ಫಲ ಕೊಡು; ಪರಿಣಾಮಕಾರಿಯಾಗು; (ದೇಹಕ್ಕೆ) ಹಿಡಿ(ಸು).
  9. ಉದ್ದೇಶ ಸಾಧಿಸು; ಉದ್ದೇಶ ಸಾಧನೆ ಮಾಡು; ಗುರಿ ಸಾಧಿಸಲು ಪ್ರಯತ್ನಿಸು.