See also 2opening
1opening ಓಪ(ಪ್‍)ನಿಂಗ್‍
ನಾಮವಾಚಕ
  1. (ಮುಖ್ಯವಾಗಿ ಒಳಹೊಗಲು ದಾರಿ ಮಾಡಿಕೊಡುವ) ತೂತು; ರಂಧ್ರ; ಕಂಡಿ; ಸಂದು; ಬಿರುಕು.
  2. (ಉದ್ಯೋಗ, ವ್ಯವಹಾರ, ಮೊದಲಾದವುಗಳಲ್ಲಿ) ಸದವಕಾಶ; ಒಳ್ಳೆಯ ಅವಕಾಶ; ಸುಯೋಗ; ಅನುಕೂಲವಾದ ಸಂದರ್ಭ, ಸನ್ನಿವೇಶ.
  3. ಪ್ರಾರಂಭ; ಉದ್ಘಾಟನೆ; ಮೊದಲ, ಆರಂಭದ–ಭಾಗ.
  4. (ಚದುರಂಗ) ಪ್ರಾರಂಭದ ಆಟ; ಮೊದಲ ನಡೆ; ಆಟದ ಪ್ರಾರಂಭದಲ್ಲಿ ರೂಢಿಯಾಗಿ ಅನುಕ್ರಮವಾಗಿ ಕಾಯಿ ನಡೆಸುವ ರೀತಿ.
  5. (ಮೊಕದ್ದಮೆಯನ್ನು ಕುರಿತು ನ್ಯಾಯವಾದಿಯು ಕೊಡುವ) ಆರಂಭ ಹೇಳಿಕೆ; ಉಪಕ್ರಮ ಭಾಷಣ; ಪ್ರಾಸ್ತಾವಿಕ ಮಾತು.
  6. ತೆರೆಯುವುದು; ಬಿಚ್ಚುವುದು; ಅರಳುವಿಕೆ; ವಿಕಸನ; ವಿಸ್ತರಣೆ.
  7. ತೆರಪು; ಅಂತರ.
  8. ಮಾರ್ಗ; ಹಾದಿ; ದ್ವಾರ.
  9. (ಪುಸ್ತಕದಲ್ಲಿನ) ಎದುರುಬದುರು ಪುಟಗಳ ಜೋಡಿ.
See also 1opening
2opening ಓಪ(ಪ್‍)ನಿಂಗ್‍
ಗುಣವಾಚಕ
  1. ಆರಂಭದ; ಮೊದಲಿನ; ಪ್ರಾರಂಭಿಕ: his opening remarks ಅವನ ಆರಂಭದ ಮಾತುಗಳು. opening batsman ಆರಂಭದ ಬ್ಯಾಟುಗಾರ.
  2. ತೆರೆಯುವ; ಬಿಚ್ಚುವ.
  3. (ಹೂಗಳ ವಿಷಯದಲ್ಲಿ) ಅರಳುವ; ವಿಕಸನದ.