opener ಓಪ(ಪ್‍)ನರ್‍
ನಾಮವಾಚಕ
  1. ತೆರೆಗ; ತೆರೆಯುವ ವಸ್ತು, ಸಾಧನ; ಭದ್ರವಾಗಿ ಮುಚ್ಚಿದ ಪಾತ್ರೆ, ಡಬ್ಬಿ, ಮೊದಲಾದವುಗಳನ್ನು ತೆರೆಯುವ ಸಾಧನ.
  2. (ಆಡುಮಾತು) (ಒಂದಾಗುತ್ತಲೊಂದು ಕ್ರಮವಾಗಿ ಬರುವ ನಾಟಕದ ಪ್ರಕರಣ, ಕ್ರೀಡಾ ಕಾರ್ಯಕ್ರಮ, ಮೊದಲಾದವುಗಳಲ್ಲಿ) ಮೊದಲನೆಯಯದು; ಪ್ರಥಮ; ಆದ್ಯ.
  3. (ಕ್ರಿಕೆಟ್‍) ಮೊದಲ ಬ್ಯಾಟುಗಾರ; ಇನಿಂಗ್ಸನ್ನು ಪ್ರಾರಂಭಿಸುವ ಬ್ಯಾಟುಗಾರ.
  4. (ಬಹುವಚನದಲ್ಲಿ) ಪೋಕರ್‍ ಮೊದಲಾದ ಇಸ್ಪೀಟಾಟಗಳಲ್ಲಿ ಪಣಕಟ್ಟಲು ಮೊದಲ ಅವಕಾಶ ನೀಡುವ ಎಲೆಗಳು.
ಪದಗುಚ್ಛ

for opener (ಆಡುಮಾತು) ಮೊದಲಿಗೆ; ಪ್ರಾರಂಭದಲ್ಲಿ.