onomatopoeia ಆನಮ್ಯಾಟಪೀಅ
ನಾಮವಾಚಕ
  1. ಅನುಕರಣ ಶಬ್ದಸೃಷ್ಟಿ; ಯಾವ ವಸ್ತುವಿಗೆ ಯಾ ಕಾರ್ಯಕ್ಕೆ ಹೆಸರಿಡಬೇಕೋ ಆ ವಸ್ತುವಿಗೆ ಯಾ ಕಾರ್ಯಕ್ಕೆ ಸಂಬಂಧಿಸಿದ, ಯಾ ಅದರ ಲಕ್ಷಣಗಳನ್ನು ಸೂಚಿಸುವಂತೆ ತೋರುವ ಧ್ವನಿಗಳಿಂದ ಹೆಸರನ್ನು ರಚಿಸುವುದು, ಉದಾಹರಣೆಗೆ cuckoo, sizzle.
  2. ಅನುಕರಣ ಶಬ್ದ: cuckoo.
  3. (ಮುಖ್ಯವಾಗಿ ಕಾವ್ಯದಲ್ಲಿ) ಅನುಕರಣ ಶಬ್ದಗಳ ಪ್ರಯೋಗ: a study of the poet’s onomatopoeia ಕವಿಯು ಪ್ರಯೋಗಿಸಿರುವ ಅನುಕರಣ ಶಬ್ದಗಳ ಅಧ್ಯಯನ.
  4. ಅರ್ಥವನ್ನು ವ್ಯಂಜಿಸುವಂಥ ಶಬ್ದಗಳ ಧ್ವನಿಯೋಜನೆ.