oner ವನರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

  1. ಒಂದು ಪೌಂಡು (ಹಣ).
  2. ಅಸಾಧಾರಣ, ಅದ್ವಿತೀಯ ವ್ಯಕ್ತಿ ಯಾ ವಸ್ತು; ಲೋಕೋತ್ತರ (ಪುರುಷ, ವಸ್ತು): a oner at (ಅಶಿಷ್ಟ) (ಯಾವುದೇ ವಿಷಯದಲ್ಲಿ) ನಿಪುಣ, ಪ್ರವೀಣ, ಚತುರ, ಪಟು.
  3. ಭಾರೀ–ಹೊಡೆತ, ಪೆಟ್ಟು, ಏಟು: gave him a oner ಕೊಟ್ಟೆ ಅವನಿಗೊಂದು; ಒಂದು ಭಾರೀ ಹೊಡೆತ ಕೊಟ್ಟೆ ಅವನಿಗೆ.
  4. ಭಾರೀ ಸುಳ್ಳು.
  5. (ಆಡುಮಾತು) (ಮುಖ್ಯವಾಗಿ ಕ್ರಿಕೆಟ್‍ನಲ್ಲಿ) ಒಂದು ರನ್ನಿನ ಹೊಡೆತ.