one-sided ವನ್‍ಸೈಡಿಡ್‍
ಗುಣವಾಚಕ
  1. (ವಿವಾದದಲ್ಲಿ) ಏಕಪಕ್ಷೀಯ; ಪಕ್ಷಪಾತದ; ಒಂದು ಕಡೆ ಓಲುವ; ಅನ್ಯಾಯವಾದ; ಪೂರ್ವಗ್ರಹಪೀಡಿತ; ರಾಗದ್ವೇಷಗಳಿಂದ ಕೂಡಿದ: a one-sided judgement ಪಕ್ಷಪಾತದ, ಏಕಪಕ್ಷೀಯವಾದ, ಅನ್ಯಾಯವಾದ –ತೀರ್ಪು.
  2. ಒಂದು ಕಡೆ ಮಾತ್ರ ಇರುವ ಯಾ ನಡೆಯುವ.
  3. ಒಂದೇ ಕಡೆ ದೊಡ್ಡದಾದ; ಒಂದು ಕಡೆ ಯಾ ಪಕ್ಕ ಇನ್ನೊಂದು ಕಡೆಗಿಂತ ಯಾ ಪಕ್ಕಕ್ಕಿಂತ ದೊಡ್ಡದಾದ.
  4. ಒಮ್ಮೊಗದ; ಒಮ್ಮಗ್ಗುಲಿನ; ಏಕಪಾರ್ಶ್ವದ; ಒಂದು ಮುಖದ: a one-sided street ಒಮ್ಮೊಗದ ಬೀದಿ; ಒಂದೇ ಸಾಲು ಮನೆಗಳಿರುವ ಬೀದಿ. a one-sided plant (ಎಲೆಗಳು ಯಾ ಹೂವುಗಳು ಕಾಂಡದ ಒಂದೇ ಕಡೆಬಿಡುವ) ಒಮ್ಮೊಗದ ಗಿಡ; ಏಕಮುಖದ ಸಸ್ಯ.