See also 2once  3once
1once ವನ್ಸ್‍
ಕ್ರಿಯಾವಿಶೇಷಣ
  1. ಒಮ್ಮೆ; ಒಂದು–ಸಲ, ಬಾರಿ, ಸಂದರ್ಭದಲ್ಲಿ: I have read it more than once ನಾನು ಅದನ್ನು ಒಂದಕ್ಕಿಂತ ಹೆಚ್ಚು ಸಲ ಓದಿದ್ದೇನೆ. shall die once ಒಮ್ಮೆ ಸಾಯಲೇ ಬೇಕು. did not once say please ಒಮ್ಮೆಯೂ ದಯವಿಟ್ಟು ಎಂದು ಹೇಳಲಿಲ್ಲ. have done it once ಒಂದು ಸಲ ಮಾಡಿದ್ದೇನೆ.
  2. ಹಿಂದೊಮ್ಮೆ; ಒಂದು , ಒಂದಾನೊಂದು–ಕಾಲದಲ್ಲಿ; ಹಿಂದಿನ ಯಾವುದೋ ಒಂದು ಖಚಿತವಲ್ಲದ ಕಾಲದಲ್ಲಿ: once there was a giant ಹಿಂದೊಮ್ಮೆ ಒಬ್ಬ ರಾಕ್ಷಸನಿದ್ದ. could once play chess ಹಿಂದೊಮ್ಮೆ ಚದುರಂಗ ಆಡುತ್ತಿದ್ದೆ.
  3. (ನಿಷೇಧಾರ್ಥಕ ಯಾ ಸೋಪಾಧಿಕ ಉಪವಾಕ್ಯಗಳಲ್ಲಿ) ಒಮ್ಮೆ; ಒಮ್ಮೆಯೂ; ಒಂದು ಸಲವೂ; ಎಂದೂ; ಎಂದಾದರೂ; ಯಾವಾಗಲಾದರೂ: if we once lose sight of him ಒಮ್ಮೆ ನಾವು ಅವನ ಕಣ್ಣು ತಪ್ಪಿದೆವೆಂದರೆ. have not seen him once ನಾನು ಅವನನ್ನು ಒಮ್ಮೆಯೂ ನೋಡಿಲ್ಲ. once within call, we are safe (ಒಮ್ಮೆ) ಕೂಗು ಕೇಳಿಸುವಷ್ಟು ಹತ್ತಿರಕ್ಕೆ ಮುಟ್ಟಿಬಿಟ್ಟೆವೆಂದರೆ, ಕೂಗಳತೆಯೊಳಗೆ ಬಂದವೆಂದರೆ, ನಾವು ಬದುಕಿದೆವು. if you once forget it ನೀವು ಯಾವಾಗಲಾದರೂ ಒಮ್ಮೆ ಅದನ್ನು ಮರೆತರೆ.
  4. ಒಂದರಷ್ಟು; ಒಂದು–ಪಟ್ಟು, ಪಾಲು; ಒಮ್ಮಡಿ.
ಪದಗುಚ್ಛ
  1. all at once
    1. ಪೂರ್ವಸೂಚನೆಯಿಲ್ಲದೆ; ಇದ್ದಕ್ಕಿದ್ದಂತೆ; ಹಠಾತ್ತಾಗಿ.
    2. ಒಟ್ಟಿಗೆ; ಎಲ್ಲವೂ ಸೇರಿ.
  2. at once
    1. ಕೂಡಲೇ; ಒಡನೆಯೇ; ತತ್‍ಕ್ಷಣವೇ; ತಡಮಾಡದೆ; ವಿಳಂಬಿಸದೆ: do it at once ಕೂಡಲೇ ಅದನ್ನು ಮಾಡಿಬಿಡು.
    2. ಒಮ್ಮೆಲೇ; ಒಟ್ಟಿಗೆ; ಸಮಾನಕಾಲದಲ್ಲಿ; ಏಕಕಾಲದಲ್ಲಿ: at once stern and tender ಏಕಕಾಲದಲ್ಲಿ ಕಠಿಣ ಹಾಗೂ ಮೃದು (ಹೃದಯ, ಸ್ವಭಾವ, ಮೊದಲಾದವು).
  3. (every) once in a while (or way) ಎಲ್ಲೋ ಒಮ್ಮೆ; ಎಂದಾದರೊಮ್ಮೆ; ಯಾವಾಗಲೋ ಒಂದೊಂದು ಸಲ; ತೀರ ಸರಳವಾಗಿ; ಅಪರೂಪವಾಗಿ.
  4. for once ಒಂದು ಸಲ; ಈ ಸಲಕ್ಕೆ ; ಬೇರೆ ಯಾವಾಗಲೂ ಅಲ್ಲದಿದ್ದರೂ ಇದೊಂದು ಸಲ.
  5. for once in a way (ಬ್ರಿಟಿಷ್‍ ಪ್ರಯೋಗ) = ಪದಗುಚ್ಛ\((6)\).
  6. for this (or that)once ಈ ಒಂದು ಸಲ; ಇದೊಂದು ಸಲ; ಇದೊಮ್ಮೆ; ಈ ಒಂದು ಬಾರಿ.
  7. my once master ನನ್ನ ಮಾಜಿ ಧಣಿ; ನನ್ನ ಹಳೆಯ ಯಜಮಾನ; ನನ್ನ ಹಿಂದಿನ ಒಡೆಯ.
  8. once again ಇನ್ನೊಮ್ಮೆ; ಮತ್ತೊಂದು ಬಾರಿ, ಸಲ.
  9. once and again ಕೆಲವೊಮ್ಮೆ; ಕೆಲವು ವೇಳೆ.
  10. once and away
    1. = ಪದಗುಚ್ಛ\((11)\).
    2. = ಪದಗುಚ್ಛ\((3)\).
  11. once (and) for all (ಮುಖ್ಯವಾಗಿ ಮೀನಮೇಷ ಎಣಿಸುವುದನ್ನು, ಅನಿಶ್ಚಿತತೆಯನ್ನು ಮುಗಿಸಲು) ಕಟ್ಟಕಡೆಯದಾಗಿ; ಅಂತಿಮವಾಗಿ; ಆಖೈರಾಗಿ; ನಿರ್ಣಾಯಕವಾಗಿ.
  12. once bitten twice shy ಒಂದು ಸಲ ಕಚ್ಚಿಸಿಕೊಂಡರೆ ಇಮ್ಮಡಿ ಹುಷಾರು; ಕಚ್ಚಿಸಿಕೊಂಡದ್ದು ಒಮ್ಮಡಿಯಾದರೆ, ಎಚ್ಚರಿಕೆ ಇಮ್ಮಡಿ.
  13. once more = ಪದಗುಚ್ಛ\((8)\).
  14. once nought is nought ಒಮ್ಮೆ ಶೂನ್ಯವಾದರೆ ಸದಾ ಶೂನ್ಯವೇ; ಒಂದು ಸಲ ಹಾಳಾಯಿತೆಂದರೆ ಅಲ್ಲಿಗೆ ಪೂರ್ತಿ ಹಾಳಾದಂತೆಯೇ.
  15. once or twice ಒಂದೆರಡು ಸಲ, ಬಾರಿ.
  16. once removed ಒಂದು (ತಲೆ) ಬಿಟ್ಟು: he is my cousin once removed ಅವನು ನನಗೆ ಒಂದು (ತಲೆ) ಬಿಟ್ಟು ಸೋದರ.
  17. once upon a time ಒಂದಾನೊಂದು ಕಾಲದಲ್ಲಿ.
See also 1once  3once
2once ವನ್ಸ್‍
ಸಂಯೋಜಕಾವ್ಯಯ

ಒಮ್ಮೆ ಮಾಡಿದರೆ; ಒಮ್ಮೆ ಮಾಡಿದ ಕೂಡಲೆ; ಒಂದು ಸಲ ಮಾಡಿದ ಕೂಡಲೇ: once he hesitates, we have him ಒಮ್ಮೆ ಅವನು ಹಿಂಜರಿದರೆ ಅವನು (ನಮಗೆ) ಸಿಕ್ಕಿಬಿದ್ದ ಎಂತಲೇ; ಒಮ್ಮೆ ಹಿಂದುಮುಂದು ನೋಡಲಿ ಅವನು ಸಿಕ್ಕಿದ ನಮ್ಮ ಕೈಗೆ ಎನ್ನಿ. once they have gone we can relax ಒಮ್ಮೆ ಅವರು ಹೋದರಂದರೆ ನಾವು ಆಗ ಸುಧಾರಿಸಿಕೊಳ್ಳಬಹುದು.

See also 1once  2once
3once ವನ್ಸ್‍
ನಾಮವಾಚಕ

ಒಮ್ಮೆ; ಒಂದು–ಬಾರಿ, ಸಲ, ಸರ್ತಿ; ಒಮ್ಮೆ ಮಾಡಿದ್ದು ಯಾ ಆದದ್ಡು: once is enough for me ಒಂದು ಸಲ ಸಾಕು ನನಗೆ; ಒಮ್ಮೆ ಮಾಡಿದ್ದು (ಆದದ್ದು) ಸಾಕು ನನಗೆ.