See also 2omnibus
1omnibus ಆಮ್ನಿಬಸ್‍
ನಾಮವಾಚಕ
  1. (ಔಪಚಾರಿಕ) = bus.
  2. ಸಂಯುಕ್ತ ಸಂಪುಟ; ಹಿಂದೆ ಬಿಡಿಬಿಡಿಯಾಗಿ ಪ್ರಕಟವಾಗಿದ್ದ ಅನೇಕ ಕಾದಂಬರಿ ಮೊದಲಾದವುಗಳನ್ನೊಳಗೊಂಡ ಒಂದೇ ಸಂಪುಟ.
  3. (ಹೋಟೆಲಿನಲ್ಲಿ ತಂಗಿರುವ ಪ್ರವಾಸಿಗಳನ್ನು ರೈಲ್ವೆ ನಿಲ್ದಾಣದಿಂದ ಹೋಟೆಲಿಗೂ ಹೋಟೆಲಿನಿಂದ ರೈಲ್ವೆ ನಿಲ್ದಾಣಕ್ಕೂ ಸಾಗಿಸುವ) ಹೋಟೆಲು ಬಸ್ಸು.
  4. (ರೈಲ್ವೆ ಕಂಪೆನಿಯವರು ಪ್ರಯಾಣಿಕರನ್ನೂ ಅವರ ಸಾಮಾನನ್ನೂ ರೈಲ್ವೆ ನಿಲ್ದಾಣದಿಂದ ಮನೆಗೂ ರೈಲ್ವೆ ನಿಲ್ದಾಣಕ್ಕೂ ಒಯ್ಯಲು ಇಟ್ಟಿರುವ) ರೈಲ್ವೆ ಬಸ್ಸು.
  5. = omnibus book.
See also 1omnibus
2omnibus ಆಮ್ನಿಬಸ್‍
ಗುಣವಾಚಕ
  1. ಬಹೂದ್ದೇಶಕ; ವಿವಿಧೋದ್ದೇಶಕ; ಒಂದೇ ಬಾರಿಗೆ ಹಲವು ಗುರಿಗಳನ್ನು, ಉದ್ದೇಶಗಳನ್ನು ಹೊಂದಿರುವ.
  2. ಬಹ್ವಂಶಕ; ಒಂದೇ ಬಾರಿಗೆ ಹಲವು ಅಂಶಗಳನ್ನು ಒಳಗೊಂಡಿರುವ: an omnibus bill ಬಹ್ವಂಶಕ ಮಸೂದೆ; ಹಲವು ಅಂಶಗಳನ್ನೊಳಗೊಂಡ ಠರಾವು. an omnibus clause ಬಹ್ವಂಶಕ ಕಲಮು; ಅನೇಕ ಅಂಶಗನ್ನೊಳಗೊಂಡ ಕಲಮು.
ಪದಗುಚ್ಛ

omnibus bar, wire, etc. ವಿದ್ಯುತ್ಪ್ರವಾಹದ ಒಟ್ಟು ರಾಶಿಯೆಲ್ಲ ಹರಿಯುವ ಕಂಬಿ, ತಂತಿ, ಮೊದಲಾದವು.