See also 2olive
1olive ಆಲಿವ್‍
ನಾಮವಾಚಕ

ಆಲಿವ್‍:

  1. ಆಲಿವ್‍ ಮರ; ಓಲಿಯ ಕುಲಕ್ಕೆ ಸೇರಿದ, ಕಡುಹಸಿರು ಬಣ್ಣದ ಭಲ್ಲೆಯಾಕಾರದ ತೊಗಲಿನಂತಿದ್ದು, ಕೆಳಭಾಗದಲ್ಲಿ ಬಿಳುಪಾಗಿರುವ ಎಲೆಗಳುಳ್ಳ, ಮುಖ್ಯವಾಗಿ ಮೆಡಿಟರೇನಿಯನ್‍ ಪ್ರದೇಶದ ಆಲಿಯ ಯೂರೋಪಿಯ ಮತ್ತು ದಕ್ಷಿಣ ಆಹ್ರಿಕದ ಆಲಿಯ ಆಹ್ರಿಕಾನ ಕುಲಗಳಿಗೆ ಸೇರಿದ, ನಿತ್ಯ ಹರಿದ್ವರ್ಣದ ಯಾವುದೇ ಮರ. Figure: olive-a
  2. ಆಲಿವ್‍ ಹಣ್ಣು; ಗಡುಸಾದ ಬೀಜ ಮತ್ತು ಅದನ್ನಾವರಿಸಿದ ಮೃದುವಾದ ಕಹಿ ತಿರುಳಿರುವ ಹಣ್ಣು ಬಿಡುವ, ಮಾಗಿಲ್ಲದಾಗ ಹಸುರಾಗಿಯೂ ಮಾಗಿದ ಮೇಲೆ ನೀಲಿ ಕಪ್ಪು ಬಣ್ಣದ್ದಾಗಿಯೂ ಇರುವ, ಅಂಡಾಕಾರದ ಚಿಕ್ಕ ಹಣ್ಣು.
  3. ಆಲಿವ್‍ ಬಣ್ಣ; ಪಕ್ವವಾಗದ ಆಲಿವ್‍ ಹಣ್ಣಿನ ನಸು ಬೂದು ಹಸುರು ಬಣ್ಣ.
  4. ಆಲಿವ್‍ (ಮರದ) ದಾರು.
  5. (ಅಂಗರಚನಾಶಾಸ್ತ್ರ) ಆಲಿವ್‍ ಊತಕ; ಹಿಮ್ಮಿದುಳಿನ (medula oblongata)ಲ್ಲಿರುವ ಆಲಿವ್‍ ಕಾಯಿಯ ಆಕಾರದ ಉಬ್ಬು ಗುಬುಟುಗಳೆರಡರಲ್ಲಿ ಒಂದು.
  6. (ಪ್ರಾಣಿವಿಜ್ಞಾನ) ಆಲಿವ ಕುಲಕ್ಕೆ ಸೇರಿದ, ಅಲಿವ್‍ ಹಣ್ಣಿನ ಆಕಾರದ ಉದರಪದಿ ಮೃದ್ವಂಗಿ ಯಾ ಈ ಮೃದ್ವಂಗಿಯ ಚಿಪ್ಪು.
  7. (ದನದ ಯಾ ಕರುವಿನ) ಮಾಂಸದ ಚೂರು ಮೊದಲಾದವುಗಳನ್ನು ಆಲಿವ್‍ ಕಾಯಿನ ಆಕಾರದಲ್ಲಿ ಸುರುಳಿ ಮಾಡಿ ಬೇಯಿಸಿದ ಭಕ್ಷ್ಯ.
  8. (ಶಾಂತಿ ಸಂಧಾನ ಸೂಚಕವಾಗಿ) ಆಲಿವ್‍–ಎಲೆ, ಕೊಂಬೆ , ಎಲೆಗಳ ದಂಡೆ.
  9. ಆಲಿವ್‍ ಕಾಯಿನ ಆಕಾರದ (ಅದಕ್ಕೆ ಜವಾಬಾದ ಇನ್ನೊಂದು ಕುಣಿಕೆಯೊಳಕ್ಕೆ ಹಾಕಿ ಉಡುಪನ್ನು ಭದ್ರಪಡಿಸುವ) ಗುಂಡಿ ಮೊದಲಾದ ಸಾಧನ.
See also 1olive
2olive ಆಲಿವ್‍
ಗುಣವಾಚಕ
  1. ಆಲಿವ್‍ ಬಣ್ಣದ; ಎಳೆಯ ಆಲಿವ್‍ ಕಾಯಿಯ ಬಣ್ಣದ.
  2. (ಮೈಬಣ್ಣದ ವಿಷಯದಲ್ಲಿ) ಹಳದಿ ಕಂದು (ಬಣ್ಣದ).