See also 2old
1old ಓಲ್ಡ್‍
ಗುಣವಾಚಕ
( ತರರೂಪ older, ತಮರೂಪ oldest).

(ವಿಶೇಷಾರ್ಥಗಳಲ್ಲಿ elder, eldest).

    1. ವಯಸ್ಸಾದ; ಮುದಿ; ಮುಪ್ಪಿನ; ವೃದ್ಧ.
    2. ವಯಸ್ಸಾದ; ಚಿಕ್ಕದಲ್ಲದ ಯಾ ಅದರ ಆರಂಭ ದಶೆಯಲಿಲ್ಲದ.
  1. ಹಳೆಯ; ಹಳತಾದ; ಹಿಂದೆಂದೋ ತಯಾರಾದ, ರಚಿಸಿದ: old book ಹಳೆಯ ಪುಸ್ತಕ.
  2. ಹಳೆಯ; ಬಹಳ ಕಾಲದಿಂದ ಬಳಕೆಯಲ್ಲಿರುವ, ಬಳಸಿರುವ: old suit ಹಳೆಯ ಸೂಟು.
  3. ಹಳೆಯ(ದಾದ); ಉಪಯೋಗವಳಿದ; (ಉಪಯೋಗಿಸಿದುದರಿಂದ) ಶಿಥಿಲವಾದ; ಜೀರ್ಣವಾದ: old clothes ಹಳೆಯ ಬಟ್ಟೆಗಳು.
  4. ವಯಸ್ಸಾದ; ಮುದಿ; ವೃದ್ಧ; ವಯಸ್ಸಾದ ಲಕ್ಷಣ, ವಯಸ್ಸಿನ ಅನುಭವ ದೌರ್ಬಲ್ಯ, ಮೊದಲಾದವುಗಳನ್ನುಳ್ಳ: the child has an old face ಮಗುವಿಗೆ ವಯಸ್ಸಾದಂತೆ ಕಾಣುವ ಮುಖವಿದೆ.
  5. ಹಳೆಯ; ನುರಿತ; ಪಳಗಿದ; ಅನುಭವಿ; ಅನುಭವ ಪಡೆದ: old in cunning ಕಪಟದಲ್ಲಿ ನುರಿತವನು, ಪಳಗಿದವನು. an old offender ಹಳೆಯ, ಪಳಗಿದ ಅಪರಾಧಿ. old in crime ಅಪರಾಧದಲ್ಲಿ ನುರಿತ.
  6. ಹಳೆಯ ಕಾಲಕ್ಕೆ ಸೇರಿದ; ಗತಕಾಲದ: old times ಹಳೆಯ ದಿನಗಳು; ಗತಕಾಲ. haunted by old memories ಗತಕಾಲದ ನೆನಪುಗಳ ಗೀಳು ಕಾಡುವ.
  7. ಬಹಳ ಹಿಂದಿನ; ಹಳೆಗಾಲದ; ಪುರಾತನ; ಪ್ರಾಚೀನ; ತೀರ ಹಳೆಯ ಕಾಲದ: old as the hills ಗಿರಿಗಳಷ್ಟು ಪ್ರಾಚೀನವಾದ. old friends ಹಳೆಯ ಗೆಳೆಯರು. an old family ಹಿಂದಿನಿಂದ ಪ್ರಸಿದ್ಧವಾದ, ಪುರಾತನವಾದ ವಂಶ, ಕುಲ.
  8. (ಒಂದು ಗೊತ್ತಾದ) ವಯಸ್ಸಿನ; ನಿರ್ದಿಷ್ಟ ವಯಸ್ಸಿನ: is four years old ನಾಲ್ಕು ವರ್ಷ ವಯಸ್ಸಾಗಿದೆ. a four-year-old boy ನಾಲ್ಕು ವರ್ಷ ವಯಸ್ಸಿನ ಹುಡುಗ.
  9. (ಭಾಷೆಯ ವಿಷಯದಲ್ಲಿ) ಹಳೆಯ; ಪ್ರಾಚೀನ; ಪುರಾತನ.
  10. (ಆಡುಮಾತು) ಹಳೆಯ; ಪ್ರಿಯ; ಪ್ರೀತಿಯಿಂದ (ಯಾ ಸಲಿಗೆಯಿಂದ) ಯಾ ಅನೌಪಚಾರಿಕವಾಗಿ ಕರೆಯುವಾಗ ಪ್ರಯೋಗ: good old Charlie ಹಳೆಯ ಪ್ರಿಯ ಚರ್ಲಿ.
  11. ಹಳೆಯ; ಹಿಂದಿನ; ಎರಡರಲ್ಲಿ ಮೊದಲನೆಯ ಯಾ ಅನೇಕ ವಸ್ತುಗಳಲ್ಲಿ ಮೊದಲನೆಯ: our old house ನಮ್ಮ ಹಳೆಯ ಮನೆ. wants his old job back ತನ್ನ ಹಳೆಯ, ಹಿಂದಿನ ಕೆಲಸವನ್ನು ಅಪೇಕ್ಷಿಸುತ್ತಾನೆ.
ಪದಗುಚ್ಛ
  1. an old name ಪ್ರಾಚೀನನಾಮ; ಹಿಂದಿನಿಂದ ಪ್ರಸಿದ್ಧವಾದ ಹೆಸರು.
  2. any old thing (ಅಶಿಷ್ಟ) ಎಂಥದೋ ಒಂದು; ಯಾವುದಾದರೂ ಸರಿ.
  3. call up old memories ಹಳೆಯ ನೆನಪುಗಳನ್ನು ಜ್ಞಾಪಕಕ್ಕೆ ತರು, ಸ್ಮರಿಸು.
  4. four etc. -year-old ನಾಲ್ಕು ಮೊದಲಾದ ವಯಸ್ಸಿನ ವ್ಯಕ್ತಿ, ಪ್ರಾಣಿ (ಮುಖ್ಯವಾಗಿ ಆ ವಯಸ್ಸಿನ ಜೂಜು ಕುದುರೆ).
  5. good old ಹಳೆಯ ವ್ಯಕ್ತಿಯ ಯಾ ವಸ್ತುವಿನ ವಿಷಯವಾಗಿ ನಿಜವಾದ ಯಾ ಅವನ ಯಾ ಅದರ ಹೆಸರಿನೊಡನೆ ಪ್ರಯೋಗ: good old uncle ನಮ್ಮ ಹಳೆಯ ದೊಡ್ಡಪ್ಪ.
  6. of old standing ಬಹಳ ಕಾಲದ; ಲಾಗಾಯತಿನಿಂದ ಇರುವ; ದೀರ್ಘಸ್ಥಾಪಿತ; ಬಹಳ ಹಿಂದಿನ ಕಾಲದಿಂದಲೂ ಇರುವ.
  7. old chap, fellow, son, etc., ಪ್ರೀತಿ ಯಾ ಸಲಿಗೆಯಿಂದ ಗಂಡಸು ಯಾ ಗಂಡು ಪ್ರಾಣಿಯನ್ನು ಸಂಬೋಧಿಸುವಾಗ ಬಳಸುವ ಪದಗುಚ್ಛ.
  8. old countries ಹಳೆನಾಡುಗಳು; ಪುರಾತನ ದೇಶಗಳು; ಬಹು ಹಿಂದಿನಿಂದ ಜನರು ವಾಸವಾಗಿರುವ ಯಾ ನಾಗರಿಕವಾಗಿರುವ ದೇಶಗಳು.
  9. Old Harry, Nick, Scratch ಸೈತಾನ.
  10. old London, Paris, England, etc.,
    1. ಪುರಾತನ, ಪ್ರಾಚೀನ–ಲಂಡನ್‍, ಪ್ಯಾರಿಸ್‍, ಇಂಗ್ಲೆಂಡ್‍, ಮೊದಲಾದವು.
    2. (ಲಂಡನ್‍ ಮೊದಲಾದ ನಗರಗಳ) ಪುರಾತನ ಅವಶೇಷಗಳು.
  11. old ocean ಅನಾದಿಕಾಲದ ಸಮುದ್ರ.
  12. old red sandstone ಬ್ರಿಟನ್ನಿನಲ್ಲಿ ದೊರಕುವ ಡೆವೋನಿಯನ್‍ ಕಾಲದ ಕೆಂಪು ಮರಳುಗಲ್ಲು.
  13. old scores
    1. ಹಳೆಯ ಲೆಕ್ಕ.
    2. (ರೂಪಕವಾಗಿ) ಹಳೆಯ ಸೇಡು: pay off old scores ಹಳೆಯ ಸೇಡು ತೀರಿಸಿಕೊ.
  14. old thing, fruit, top, etc., (ಅಶಿಷ್ಟ) = ಪದಗುಚ್ಛ\((7)\).
  15. the old
    1. ಹಳೆಯದು; ಹೊಸತಲ್ಲದ್ದು.
    2. ವಯಸ್ಸಾದವರು; ಮುದುಕರು; ವೃದ್ಧರು.
  16. the old country (ವಲಸೆಗಾರರು, ನೆಲಸುನಾಡಿನವರು, ಮೊದಲಾದವರು ತಮ್ಮ ತಾಯ್ನಾಡಿನ ವಿಷಯವಾಗಿ ಮಾತನಾಡುವಾಗ) ಮಾತೃಭೂಮಿ; ತಾಯ್ನಾಡು; ಸ್ವದೇಶ.
  17. the old changeth ಹಳೆಯ ಸಂಪ್ರದಾಯಗಳು ಮಾರ್ಪಡುತ್ತವೆ.
  18. the yound and old ಆಬಾಲವೃದ್ಧರು; ಎಲ್ಲರೂ.
  19. a man is as old as he feels ಮನಸ್ಸಿಗೆ ಅನಿಸಿದಷ್ಟು ಒಬ್ಬನ ಪ್ರಾಯ; ನಮಗೆ ಎಷ್ಟು ವಯಸ್ಸಾಗಿದೆ ಎಂದು ಅಂದು ಕೊಳ್ಳುತ್ತೇವೆಯೋ ನಮಗೆ ಅಷ್ಟೇ ವಯಸ್ಸು; ಮನೋಭಾವನೆಗೆ ತಕ್ಕಂತೆ ಮನುಷ್ಯನ ವಯಸ್ಸು.
  20. an old one ಎಲ್ಲರಿಗೂ ತಿಳಿದಿರುವ ಚಟಾಕಿ, ಹಾಸ್ಯೋಕ್ತಿ.
  21. have a fine, good, high, etc., old time (ಅಶಿಷ್ಟ) ಚೆನ್ನಾಗಿ ಮೋಜುಮಾಡು; ಖುಷಿಪಡು; ಸುಖ, ಸಂತೋಷ ಅನುಭವಿಸು; ಮಜಾಮಾಡು.
  22. little old (ಅಮೆರಿಕನ್‍ ಪ್ರಯೋಗ) (ವ್ಯಕ್ತಿ ಯಾ ವಸ್ತುವನ್ನು ಪ್ರೀತಿಯಿಂದ ಯಾ ತಮಾಷೆಯಿಂದ ಮಾತನಾಡಿಸುವಾಗ ಬಳಸುವ ಪದ).
  23. my old bones ಮುದುಕನಾದ ನಾನು, ನನ್ನನ್ನು.
  24. old head on young shoulders ವಯೋವೃದ್ದನಲ್ಲದಿದ್ದರೂ ಜ್ಞಾನವೃದ್ಧ; ಎಳೆಯ ವಯಸ್ಸಾದರೂ ಬೆಳೆದ ಬುದ್ಧಿಯವನು.
  25. old wives’ tale ಮುದುಕಿ ಕತೆ; ಅಜ್ಜಿಕತೆ; ಗೊಡ್ಡು ಪದ್ಧತಿ ಯಾ ನಂಬಿಕೆ; ದಡ್ಡತನದ ಯಾ ಅವೈಜ್ಞಾನಿಕವಾದ ಸಂಪ್ರದಾಯ ಅಥವಾ ನಂಬಿಕೆ.
  26. the century grows old ಶತಮಾನ ಮುಗಿಯುತ್ತಿದೆ, ಕಳೆಯುತ್ತ ಬಂದಿದೆ.
  27. the good old days(or times) ಹಳೆಯ ಸುದಿನಗಳು; ಚೆನ್ನಾಗಿದ್ದವೆಂದು ಭಾವಿಸಲಾದ ಹಳೆಯ ಕಾಲದ ಸಂಪ್ರದಾಯಗಳು ಮೊದಲಾದವು.
  28. the old one(or gentleman) ಸೈತಾನ.
See also 1old
2old ಓಲ್ಡ್‍
ನಾಮವಾಚಕ

ಹಿಂದಿನ, ಪೂರ್ವ–ಕಾಲ.

ಪದಗುಚ್ಛ
  1. have heard it of old ಬಹುಕಾಲದ ಹಿಂದೆಯೇ ಅದನ್ನು ಕೇಳಿದ್ದೇನೆ.
  2. of old ಹಿಂದಿನ ಕಾಲದ; ಪ್ರಾಚೀನ ಕಾಲದ.
  3. of old there were giants ಹಿಂದೆ ಮಹಾಮಹಾ ಪುರುಷರಿದ್ದರು.
  4. the men of old ಹಿಂದಿನವರು; ಪುರಾತನರು; ಪ್ರಾಚೀನರು.