See also 2offset
1offset ಆಹ್‍ಸೆಟ್‍
ನಾಮವಾಚಕ
  1. (ಕಾಂಡದಿಂದ ಯಾ ಬೇರಿನಿಂದ ಮೊಳೆತು ಬೇರೆ ಗಿಡವಾಗಿ ಬೆಳೆಸಲು ಬರುವ) ಸಣ್ಣಕುಡಿ; ಮೊಳಕೆ; ಅಂಕುರ; ಗಿಣ್ಣು.
  2. (ರೂಪಕವಾಗಿ) (ಒಂದುವಂಶದ) ಶಾಖೆ.
  3. ಉತ್ತಾರ; ಪರಿಹಾರ; ಈಡು; ಪ್ರತಿಭಾರ; ಸರಿತೂಕ; ಪ್ರತಿ ಯೋಜನೆ; ವ್ಯತಿರಿಕ್ತ ಪ್ರಭಾವ ತಗ್ಗಿಸುವ ಯಾ ನಿಷ್ಟ್ರಯೋಜನಗೊಳಿಸುವ–ಯೋಜನೆ ಯಾ ಹಣ.
  4. (ವಾಸ್ತುಶಿಲ್ಪ) ವಾಟದಂಚು; ಬಾಗೋರೆ; (ಗೋಡೆ ಮೊದಲಾದವುಗಳಲ್ಲಿ ಮೇಲ್ಭಾಗದ ದಪ್ಪ ಕಡಿಮೆಯಾಗಲು ಆರಂಭವಾಗುವ ಸ್ಥಳದಲ್ಲಿ ಮಾಡಿದ) ಇಳಿಜಾರು ಅಂಚು.
  5. (ಪರ್ವತ ಯಾ ಬೆಟ್ಟದ) ಚಾಚು (ಭಾಗ).
  6. ನಾಳದ ಬಾಗು; ಒಂದು ನಾಳದ (ಕೊಳವೆಯ) ಮಾರ್ಗಕ್ಕೆ ಅಡ್ಡ ಬರುವ ತಡೆಯನ್ನು ದಾಟಿಹೋಗಲು ಅದರಲ್ಲಿ ಮಾಡಿದ ಬಾಗು.
  7. (ಕೆಲವೊಮ್ಮೆ ವಿಶೇಷಣವಾಗಿ ಪ್ರಯೋಗ) (ಮುದ್ರಣ) ಆಹ್‍ಸೆಟ್‍ ಮುದ್ರಣ; ಒತ್ತಿದಚ್ಚು, (ಮುದ್ರಣ); ಮಸಿಮುದ್ರಣ; ಮಸಿಯೊತ್ತು ಮುದ್ರಣ; ಅಚ್ಚಿನ ಯಾ ಶಿಲಾಫಲಕದಿಂದ ಮಸಿಯನ್ನು ಸಮತಲವಾದ ರಬ್ಬರಿನ ಯಾ ಉರುಳೆಯ ಮೇಲ್ಮೈಗೆ ಒತ್ತುವ ಮೂಲಕ ವರ್ಗಾಯಿಸಿ, ಅನಂತರ ಅದನ್ನು ಕಾಗದ ಮೊದಲಾದವುಗಳ ಮೇಲೆ ಒತ್ತಿ ಅಚ್ಚುಮಾಡುವ ಯಾ ಪ್ರತಿತೆಗೆಯುವ ವಿಧಾನ.
  8. (ಮೋಜಣಿ) ಲಂಬದೂರ; ಅಳತೆಯ ಮುಖ್ಯ ರೇಖೆಯನ್ನು ಅದಕ್ಕೆ ಲಂಬವಾಗಿ ಅಳೆದ ಸ್ವಲ್ಪ ದೂರ.
  9. (ವಿರಳ ಪ್ರಯೋಗ) ಹೊರಡುವುದು; ಆರಂಭ (ದಶೆ).
See also 1offset
2offset ಆಹ್‍ಸೆಟ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ offsetting; ಭೂತರೂಪ ಮತ್ತು ಭೂತಕೃದಂತ ಅದೇ)
  1. ಪ್ರತಿತೋಲನ ಮಾಡು; ಸರಿದೂಗಿಸು; ಉತ್ತಾರ ಹಾಕು; ಪರಿಹಾರ ಕೊಡು; ಈಡುಮಾಡು; ತುಂಬಿ ಕೊಡು; ಭರ್ತಿ ಹಾಕಿಕೊಡು: the gains offset the losses ಲಾಭವು ನಷ್ಟವನ್ನು ತುಂಬಿ ಕೊಡುತ್ತದೆ; ಲಾಭನಷ್ಟಗಳು ಸರಿದೂಗುತ್ತವೆ.
  2. (ಮುಖ್ಯವಾಗಿ ಭೂತಕೃದಂತದಲ್ಲಿ )ಗೆರೆ ಬಿಟ್ಟು ಇಡು.
  3. ಆಹ್‍ಸೆಟ್‍ ವಿಧಾನದಲ್ಲಿ ಮುದ್ರಿಸು.