offing ಆಹಿಂಗ್‍
ನಾಮವಾಚಕ
  1. ದೂರಗೋಚರ ಸಮುದ್ರ ಭಾಗ; ದಡದಿಂದ ದೂರದಲ್ಲಿ ಯಾ ಲಂಗರು ಹಾಕುವ ಸ್ಥಳಕ್ಕೆ ಆಚೆ, ಕಣ್ಣಿಗೆ ಕಾಣುವ ಕಡಲ ಭಾಗ: was seen in the offing ದೂರದಲ್ಲಿ ಕಾಣಿಸುವ ಸಮುದ್ರಭಾಗದಲ್ಲಿ ಕಾಣಿಸಿಕೊಂಡಿತು.
  2. ತೀರದಿಂದ ದೂರವಿರುವ (ಸಮುದ್ರ) ಸ್ಥಾನ.
ಪದಗುಚ್ಛ
  1. gain an offing ಸಮುದ್ರ ತೀರದಿಂದ ದೂರ(ಸ್ಥಾನ)ದಲ್ಲಿರು.
  2. in the offing
    1. ಸದ್ಯದಲ್ಲಿ ಯಾ ಮುಂದೆ ಸ್ವಲ್ಪ ಕಾಲದಲ್ಲಿ: a wedding was in the offing ಸದ್ಯದಲ್ಲಿಯೇ ಒಂದು ಮದುವೆ ನಡೆಯುವ ಸಂಭವವಿತ್ತು.
    2. ಹತ್ತಿರದಲ್ಲಿ; ಸಮೀಪದಲ್ಲಿ; ಅನತಿದೂರದಲ್ಲಿ: a waiter hovered in the offing ಹತ್ತಿರದಲ್ಲೇ ಸುಳಿದಾಡಿದ ಒಬ್ಬ ಪರಿಚಾರಕ.
  3. keep an offing = ಪದಗುಚ್ಛ\((1)\).