See also 2official
1official ಅಹಿಷ(ಷ್‍)ಲ್‍
ಗುಣವಾಚಕ
  1. ಕಚೇರಿಯ; ಹುದ್ದೆಯ; ಅಧಿಕಾರದ; (ಕರ್ತವ್ಯವಾಗಿರುವ) ಅಧಿಕಾರಕ್ಕೆ ಸಂಬಂಧಿಸಿದ.
  2. ಅಧಿಕಾರಾವಧಿಯ ಯಾ ಅದಕ್ಕೆ ಸಂಬಂಧಿಸಿದ.
  3. ಅಧಿಕಾರದ; ಅಧಿಕಾರಿಗಳ ಯಾ ಅಧಿಕಾರಶಾಹಿಯ ಲಕ್ಷಣದ.
  4. ಅಧಿಕೃತ; ಅಧಿಕಾರದಲ್ಲಿರುವ ವ್ಯಕ್ತಿಯಿಂದಾದ ಯಾ ಆ ಸಂಬಂಧದ.
  5. ಅಧಿಕಾರದಲ್ಲಿರುವ; ಸಾರ್ವಜನಿಕ ಹುದ್ದೆಯಲ್ಲಿ ನೇಮಕಗೊಂಡ.
  6. (ವೈದ್ಯಶಾಸ್ತ್ರ) ಅಧಿಕೃತ; ಅಧಿಕೃತ ಔಷಧಕ್ಕೆ ಮತ್ತು ಗ್ರಂಥಕ್ಕೆ ಅನುಸಾರವಾದ.
  7. ಅಧಿಕಾರಿಗಳಿಗೆ ಕಚೇರಿಯವರಿಗೆ–ವಾಡಿಕೆಯಾದ, ಸಹಜವಾದ: offical solemnity ಅಧಿಕಾರ ಸಹಜ ಗಾಂಭೀರ್ಯ.
See also 1official
2official ಅಹಿಷ(ಷ್‍)ಲ್‍
ನಾಮವಾಚಕ
  1. ಅಧಿಕಾರಿ; ಹುದ್ದೆಗಾರ; ಉದ್ಯೋಗಸ್ಥ; ತನ್ನ ಹುದ್ದೆಗೆ ಸಂಬಂಧಿಸಿದ ಕರ್ತವ್ಯಗಳಲ್ಲಿ ನಿರತನಾದವನು.
  2. (ಆರ್ಚ್‍ ಬಿಷಪ್‍, ಬಿಷಪ್‍ ಯಾ ಮುಖ್ಯವಾಗಿ ಆರ್ಚ್‍ ಡೀಕನ್‍ ಮೊದಲಾದ) ನ್ಯಾಯಸ್ಥಾನದ ಅಧ್ಯಕ್ಷ, ನ್ಯಾಯಾಧಿಪತಿ.
ಪದಗುಚ್ಛ

official principal = 2official(2).