office ಆಹಿಸ್‍
ನಾಮವಾಚಕ
  1. ಕಚೇರಿ; ಆಹೀಸು; ಕಾರ್ಯಸ್ಥಾನ; ಕಾರ್ಯಾಲಯ; ಕೆಲಸದ ಸ್ಥಳವಾಗಿ, ಮುಖ್ಯವಾಗಿ ಗುಮಾಸ್ತೆಯ ಯಾ ಆಡಳಿತದ ಕೆಲಸ ನಡೆಸಲು ಬಳಸುವ ಕೋಣೆ ಯಾ ಕಟ್ಟಡ.
  2. ಕಚೇರಿ; ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತುಮಾಡಿರುವ ಕೊಠಡಿ ಯಾ ಇಲಾಖೆ ಯಾ ಕಟ್ಟಡ: booking office (ರೈಲ್ವೆ ಕಚೇರಿಯ) ಬುಕಿಂಗ್‍ ಆಹೀಸು. enquiry office ವಿಚಾರಣಾ ಕಚೇರಿ. ticket office ಟಿಕೆಟ್‍ ಕೊಡುವ ಕೊಠಡಿ. post office ಅಂಚೆಕಚೇರಿ.
  3. (ಸ್ಥಳೀಯ) ಕಚೇರಿ; ಒಂದು ದೊಡ್ಡ ಸಂಸ್ಥೆಯ ಸ್ಥಳೀಯ ಶಾಖಾ ಕಚೇರಿ: our Bangalore office ನಮ್ಮ ಬೆಂಗಳೂರು ಶಾಖೆಯ ಕಚೇರಿ.
  4. (ಅಮೆರಿಕನ್‍ ಪ್ರಯೋಗ) (ವೈದ್ಯ ಮೊದಲಾದ ವೃತ್ತಿನಿರತ ವ್ಯಕ್ತಿಯ) ಸಲಹಾ–ಕೋಣೆ, ರೂಮು, ಕೊಠಡಿ.
  5. (ಮುಖ್ಯವಾಗಿ ಸಾರ್ವಜನಿಕ) ಹುದ್ದೆ; ಅಧಿಕಾರ ಸ್ಥಾನ; ಉದ್ಯೋಗ; ಪದವಿ; ಕರ್ತವ್ಯಗಳ ಜವಾಬ್ದಾರಿಯುಳ್ಳ ಕೆಲಸ, ಹುದ್ದೆ: was given an office under the government ಸರ್ಕಾರಿ ಹುದ್ದೆಯನ್ನು ಕೊಡಲಾಯಿತು.
  6. (ಮುಖ್ಯವಾಗಿ ಸಚಿವನ ಯಾ ಅಧಿಕಾರದಲ್ಲಿರುವ ಪಕ್ಷದ) ಅಧಿಕಾರಾವಧಿ: take office ಅಧಿಕಾರ ವಹಿಸಿಕೊ. enter upon office ಅಧಿಕಾರಕ್ಕೆ ಬರು. hold office ಅಧಿಕಾರ ಪಡೆದಿರು; ಅಧಿಕಾರದಲ್ಲಿರು. out of office for 13 years ಹದಿಮೂರು ವರ್ಷ ಅಧಿಕಾರದಲ್ಲಿರಲಿಲ್ಲ.
  7. (Office) ಕಚೇರಿ; ಕಾರ್ಯಾಲಯ:
    1. ಒಂದು ಸರ್ಕಾರಿ ಇಲಾಖೆಯ ಕಾರ್ಯಸ್ಥಾನ: Foreign Office ವಿದೇಶಾಂಗ ವ್ಯವಹಾರ (ಖಾತೆಯ) ಕಚೇರಿ.
    2. ಒಂದು ಸರ್ಕಾರಿ ಇಲಾಖೆ ಯಾ ಇಲಾಖೆಯ ಸಿಬ್ಬಂದಿ, ಅಧಿಕಾರಿ ವರ್ಗ: the War Office ಯುದ್ಧ ಇಲಾಖೆಯ ಯಾ ಯುದ್ಧಖಾತೆ ಕಚೇರಿಯ ಅಧಿಕಾರಿವರ್ಗ. Post Office ಅಂಚೆ ಇಲಾಖೆ(ಯವರು).
    3. ಒಂದು ಸರ್ಕಾರಿ ಇಲಾಖೆಯ ಒಟ್ಟು ಅಧಿಕಾರ.
    1. ಒಬ್ಬನ ಹುದ್ದೆಗೆ, ಸ್ಥಾನಕ್ಕೆ ಸಂಬಂಧಿಸಿದ ಕರ್ತವ್ಯ: it is my office ಅದು ನನ್ನ ಕರ್ತವ್ಯ.
    2. ಮಾಡಬೇಕಾದ ಕೆಲಸ, ಕಾರ್ಯ: the office of the arteries ಧಮನಿಗಳ ಕೆಲಸ.
  8. (ಸಾಮಾನ್ಯವಾಗಿ ಬಹುವಚನದಲ್ಲಿ)
    1. ದಯೆ (ತೋರಿಸುವುದು); ಮರ್ಯಾದೆ(ಯಿಂದ) ನೋಡುವುದು.
    2. ಉಪಕಾರ.
  9. (ಚರ್ಚ್‍)
    1. ಅಧಿಕೃತ ಆರಾಧನ ಕ್ರಮ.
    2. (ರೋಮನ್‍ ಕ್ಯಾಥೊಲಿಕ್‍ ಚರ್ಚುಗಳಲ್ಲಿ ಗೊತ್ತು ಮಾಡಿರುವ ಪಾರಾಯಣ ಪುಸ್ತಕದ) ದಿನಚರಿ–ಪಠನ, ಪಾರಾಯಣ: say the office (ರೋಮನ್‍ ಕ್ಯಾಥೊಲಿಕ್‍) ದಿನಚರಿ ಪಾರಾಯಣ ಮಾಡು.
    3. (ಆಂಗ್ಲಿಕನ್‍ ಚರ್ಚ್‍) ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆ; ಮಾಸ್‍ ಸಂಸ್ಕಾರಸಂಬಂಧವಾದ ಪ್ರಾರ್ಥನೆ, ಆರಾಧನೆ; ಸಂದರ್ಭಾನುಸಾರವಾದ ಇತರ ಪ್ರಾರ್ಥನೆ, ಮಾಸ್‍ ಸಂಸ್ಕಾರ, ಇತ್ಯಾದಿ.
  10. ವಿಧಿವಿಹಿತ–ಕ್ರಿಯೆ, ಆಚರಣೆ, ಸಂಸ್ಕಾರ.
  11. (ಬಹುವಚನದಲ್ಲಿ) (ಬ್ರಿಟಿಷ್‍ ಪ್ರಯೋಗ) (ಕೊಠಡಿಗಳು, ಔಟ್‍ ಹೌಸ್‍, ಮೊದಲಾದ) ಅಂಕಣಗಳು; ಗೃಹವಿಭಾಗಗಳು; ಮನೆಯ ಬೇರೆ ಬೇರೆ ಕೆಲಸಗಳಿಗೂ, ಉಗ್ರಾಣ ಮೊದಲಾದವುಗಳಿಗೂ ಬಳಸುವ ಮನೆಯ ಭಾಗಗಳು: three bedrooms, bathroom and compact offices ಮನೆಯ ಮೂರು ಮಲಗುವ ಮನೆಗಳು, ಸ್ನಾನದ ಮನೆ ಮತ್ತು ಅದಕ್ಕೆ ಅಡಕವಾದ ಬೇರೆ ಬೇರೆ ಅಂಕಣಗಳು.
  12. (ಅಶಿಷ್ಟ) ತಿಳಿವಳಿಕೆ; ಸೂಚನೆ; ಸಂಜ್ಞೆ: give the office ತಿಳಿವಳಿಕೆ ಕೊಡು. take the office ಸೂಚನೆ ಪಡೆ.
  13. ಲೆಕ್ಕದ ಮನೆ.
  14. ಒಂದು ನಿರ್ದಿಷ್ಟ ಉದ್ದೇಶದ ಸಂಸ್ಥೆ, ಕಂಪನಿ: Insurance Office ವಿಮಾ ಕಚೇರಿ ಕಂಪನಿ.
ಪದಗುಚ್ಛ
  1. divine office = office(10b).
  2. hold office ಅಧಿಕಾರದಲ್ಲಿರು.
  3. ill office ಅಪಕಾರ: owing to the ill offices of ಅಪಕಾರದಿಂದಾಗಿ.
  4. Office for the Dead ಮೃತರ ಗೌರವಾರ್ಥ ನಡೆಸುವ ಪ್ರಾರ್ಥನೆ ಮೊದಲಾದವು.
  5. the last offices ಮೃತ ಸಂಸ್ಕಾರ; ಅಂತ್ಯಕ್ರಿಯೆ.
  6. through (or owing to) the good offices of ಉಪಕಾರದಿಂದಾಗಿ.