offend ಅಹೆಂಡ್‍
ಸಕರ್ಮಕ ಕ್ರಿಯಾಪದ
  1. ಮನಸ್ಸು ನೋಯಿಸು; ಮನನೋಯುವಂತೆ ಮಾಡು: I am sorry you are offended ನಿನ್ನ ಮನಸ್ಸು ನೊಂದಿರುವುದಕ್ಕಾಗಿ ನನಗೆ ವ್ಯಥೆಯಾಗಿದೆ.
  2. ರೇಗಿಸು; ಕೋಪ, ಸಿಟ್ಟು–ಬರುವಂತೆ ಮಾಡು.
  3. ಅಸಹ್ಯ ಹುಟ್ಟಿಸು; ಜುಗುಪ್ಸೆಯುಂಟುಮಾಡು: it offends her delicacy ಅದು ಅವಳ ಸೂಕ್ಷ್ಮ ಸ್ವಭಾವಕ್ಕೆ ಅಸಹ್ಯವೆನಿಸುವಂತಿದೆ.
ಅಕರ್ಮಕ ಕ್ರಿಯಾಪದ
  1. ಕಾನೂನು, ಮರ್ಯಾದೆ, ಮೊದಲಾದವನ್ನು–ಮೀರು, ಅತಿಕ್ರಮಿಸು, ಉಲ್ಲಂಘಿಸು; ಅಪರಾಧ ಮಾಡು.
  2. (ಒಬ್ಬರ ಯಾ ಒಂದರ ವಿರುದ್ಧ) ತಪ್ಪು ಮಾಡು; ತಪ್ಪೆಸಗು.