offence ಅಹೆನ್ಸ್‍
ನಾಮವಾಚಕ
  1. ಕಾನೂನುಬಾಹಿರ ಕಾರ್ಯ, ಚಟುವಟಿಕೆ; ಅಪರಾಧ.
  2. (ನಿಯಮ ಮೊದಲಾದವುಗಳ) ಉಲ್ಲಂಘನೆ; ತಪ್ಪು ಯಾ ಅಸಭ್ಯ ನಡವಳಿಕೆ.
    1. ಮನಸ್ಸು ನೋಯಿಸುವುದು: no offence was meant ಮನಸ್ಸು ನೋಯಿಸುವುದು (ಅವನ) ಉದ್ದೇಶವಾಗಿರಲಿಲ್ಲ.
    2. ನೊಂದ ಮನಸ್ಸು.
  3. ಆಕ್ರಮಣ; ದಾಳಿ; ಮೇಲೆ ಬೀಳುವುದು; ಹೋರಾಡಲು ತಾನಾಗಿ ಮುನ್ನುಗ್ಗುವುದು: the most effective defence is offence ಆಕ್ರಮಣವೇ ಅತ್ಯಂತ ಪರಿಣಾಮಕಾರಿಯಾದ (ಸ್ವ)ರಕ್ಷಣೆ; ತಾನಾಗಿ ಮೊದಲು ಆಕ್ರಮಣ ಮಾಡುವುದೇ ಅತ್ಯಂತ ಪರಿಣಾಮಕಾರಿ ರಕ್ಷಣೆ.
  4. ಕಿರಿಕಿರಿ; ಕಿರುಕುಳ; ಅಪಚಾರ; ಕಾಟ: give offence to ಕಿರಿಕಿರಿಯನ್ನು ಉಂಟುಮಾಡು; ಕಾಟ ಕೊಡು.
  5. ಮುನಿಸು; ಸಿಟ್ಟು; ಅಸಮಾಧಾನ: cannot be done without offence ಅಸಮಾಧಾನ ಪಡಿಸದೆ ಅದನ್ನು ಮಾಡುವುದು ಸಾಧ್ಯವಿಲ್ಲ. his words have given offence at court ನ್ಯಾಯಾಲಯದಲ್ಲಿ ಅವನ ಮಾತುಗಳು ಸಿಟ್ಟು ಬರುವಂತೆ ಮಾಡಿವೆ.
ಪದಗುಚ್ಛ
  1. give offence ಮನ ನೋಯಿಸು.
  2. his youthful offences ಅವನ ಯೌವನದ ಅಪರಾಧಗಳು.
  3. take offence ಮನನೋಯು.
  4. commit an offence against (ಒಬ್ಬನ, ಒಂದರ ವಿರುದ್ಧ) ಅಪಾರಾಧವೆಸಗು.
  5. too quick to take offence ಬಹುಬೇಗ ತಪ್ಪು ತಿಳಿದುಕೊಳ್ಳುವ.