See also 2off  3off  4off
1off ಆಹ್‍
ಕ್ರಿಯಾವಿಶೇಷಣ
  1. ದೂರ; ದೂರಕ್ಕೆ; ದೂರದಲ್ಲಿ: ward off disaster ವಿಪತ್ತನ್ನು ದೂರ ಮಾಡು. drove off ದೂರ ಓಡಿಸಿದ. is three miles off ಮೂರು ಮೈಲಿ ದೂರದಲ್ಲಿದೆ.
    1. ನೆಲೆ ತಪ್ಪಿ; ಸ್ಥಾನಬಿಟ್ಟು; ಸೇರಿರದೆ; ಸೋಕಿರದೆ; ಸಂಬಂಧಿಸಿರದೆ: my hat is off ನನ್ನ ಹ್ಯಾಟನ್ನು ತಲೆಯಿಂದ ತೆಗೆದಿದೆ. has come off ಬಿಟ್ಟು ಹೋಗಿದೆ; ಕಿತ್ತು ಹೋಗಿದೆ; ಹೊರ ಬಂದಿದೆ.
    2. ಕಳಚಿ, ಬಿಚ್ಚಿ (ಹಾಕಿ): take his clothes off ಅವನ ಬಟ್ಟೆಯನ್ನು ಕಳಚಿ ಹಾಕು: take your coat off ನಿನ್ನ ಕೋಟನ್ನು ಕಳಚಿ ಹಾಕು.
  2. ಕಳೆದುಕೊಂಡು; ತೊಲಗಿಸಿ; ನಿವಾರಿಸಿ; ಪರಿಹರಿಸಿಕೊಂಡು: sleep it off ನಿದ್ದೆ ಮಾಡು (ಮಾನಸಿಕ ಕ್ಲೇಶ ಮೊದಲಾದವನ್ನು) ಕಳೆದುಕೊ.
  3. ವಿಚ್ಛಿನ್ನಗೊಳಿಸಿ; ನಡೆಯುತ್ತಿರುವುದನ್ನು ನಿಲ್ಲಿಸಿ, ಮುರಿದು, ತಪ್ಪಿಸಿ, ಕಡಿದು: broke off (ಮಾತನ್ನು, ಭಾಷಣವನ್ನು) ಅಲ್ಲಿಗೇ ಕಡಿದ, ನಿಲ್ಲಿಸಿದ. the engagement is off ಮದುವೆಯಾಗುವೆವೆಂಬ ಅವರ ಒಪ್ಪಂದ ಮುರಿದು ಬಿತ್ತು. declare off ಒಪ್ಪಂದ ಮುರಿಯಿತೆನ್ನು. the gas is off ಅನಿಲವು ನಿಂತುಹೋಗಿದೆ; ಅನಿಲದ ಪ್ರವಾಹ ನಿಂತು ಹೋಗಿದೆ. turn off the radio ರೇಡಿಯೋವನ್ನು ನಿಲ್ಲಿಸು. take a day off ಒಂದು ದಿವಸ ರಜೆ ತೆಗೆದುಕೊ. the game is off ಆಟ ನಿಂತಿತು, ತಪ್ಪಿ ಹೋಯಿತು.
  4. ಮುಗಿದು ಹೋಗಿ; ಕೇಳಿದರೆ ಸಿಕ್ಕದೆ: sweets are off ಸಿಹಿ ತಿನಿಸು ಮುಗಿದು ಹೋಗಿದೆ.
  5. ಕೊನೆಯವರೆಗೂ; ಸಂಪೂರ್ಣವಾಗಿ; ಮುಗಿದು, ತೀರಿ–ಹೋಗುವಂತೆ: drink off ಎಲ್ಲವನ್ನೂ ಕುಡಿದು ಬಿಡು. pay off ಸಂಪೂರ್ಣವಾಗಿ (ಹಣ ಮೊದಲಾದವನ್ನು) ಸಲ್ಲಿಸಿ ಬಿಡು. clear off ಮುಗಿಸಿ ಬಿಡು. finish off ತೀರಿಸಿಬಿಡು.
  6. (ಹಣ, ಪೂರೈಕೆ ಪದಾರ್ಥಗಳು, ಮೊದಲಾದವುಗಳ ವಿಷಯದಲ್ಲಿ) ಪರಿಸ್ಥಿತಿಯಲ್ಲಿರುವ: is badly off ದುರ್ದಶೆಯಲ್ಲಿ, ದುಃಸ್ಥಿತಿಯಲ್ಲಿ(ದ್ದಾನೆ). is not very well off ಅಷ್ಟೇನೂ ಶ್ರೀಮಂತನಾಗಿಲ್ಲ, ಸುಸ್ಥಿತಿಯಲ್ಲಿಲ್ಲ. comfortably off (ಆರ್ಥಿಕವಾಗಿ) ತಕ್ಕಮಟ್ಟಿಗೆ ಅನುಕೂಲವಾಗಿ, ಅನುಕೂಲಸ್ಥಿತಿಯಲ್ಲಿ.
  7. ನೇಪಥ್ಯದಲ್ಲಿ; ತಂಗದ ಮೇಲಲ್ಲದೆ: noises off ನೇಪಥ್ಯದಲ್ಲಿ ಗಲಾಟೆಗಳು.
  8. (ಆಹಾರ ಮೊದಲಾದವುಗಳ ವಿಷಯದಲ್ಲಿ) ಹಳಸಲಾರಂಭಿಸಿ; ಕೆಡಲಾರಂಭಿಸಿ.
  9. (ಸಂಖ್ಯೆಯಾದ ನಂತರ ಪ್ರಯೋಗ) ಒಂದು ಸಲ ಮಾಡಿದ ಯಾ ತಯಾರಿಸಿದ ಪ್ರಮಾಣವನ್ನು ಸೂಚಿಸುವಲ್ಲಿ, ಮುಖ್ಯವಾಗಿ one-off ಒಂದೇ ಒಂದು ಒಬ್ಬೆ.
ಪದಗುಚ್ಛ
  1. a bit off (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ತುಸು ಕಿರಿಕಿರಿಯುಂಟುಮಾಡುವ ಯಾ ಅನುಚಿತವಾದ.
    2. ಸ್ವಲ್ಪ ಅಸ್ವಸ್ಥನಾ(ಳಾ)ಗಿರುವ: an feeling a bit off ನಾನು ತುಸು ಅಸ್ವಸ್ಥನಾಗಿರುವಂತೆ ಅನ್ನಿಸುತ್ತದೆ.
  2. be off (ಇಲ್ಲಿಂದ) ನಡಿ; ಹೊರಡು.
  3. be off with(the old love) (ನಿನ್ನ ಹಳೆಯ ಪ್ರೇಯಸಿಯ) ಸಂಬಂಧವನ್ನು ತೊರೆದುಬಿಡು, ಬಿಟ್ಟುಬಿಡು; (ಸಂಬಂಧ) ಕಡಿದುಕೊ.
  4. break off (ಮಾತನ್ನು ಭಾಷಣವನ್ನು) ಅಲ್ಲಿಗೇ ನಿಲ್ಲಿಸಿ.
  5. get one’s daughters, stock off ತನ್ನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟುಬಿಡು, ಸರಕನ್ನು ಮಾರಿಬಿಡು.
  6. off and on ಒಮ್ಮೊಮ್ಮೆ; ಒಂದೊಂದು ವೇಳೆ; ಆಗೊಮ್ಮೆ ಈಗೊಮ್ಮೆ; ವಿರಳವಾಗಿ ಬಿಟ್ಟುಬಿಟ್ಟು; ಆಗಾಗ.
  7. off with his head ತೆಗೆ ಅವನ ತಲೆಯನ್ನು! ಅವನ ತಲೆಯನ್ನು ಹಾರಿಸು!
  8. off with you ನಡಿ; ಹೊರಡು ಇಲ್ಲಿಂದ; ತೊಲಗು ಆಚೆಗೆ.
  9. take oneself off ಹೊರಡು; ಹೊರಟುಹೋಗು.
  10. the gilt is off ಭ್ರಾಂತಿ ನಿವಾರಣೆಯಾಯಿತು, ಮೋಹವಳಿಯಿತು; (ಭ್ರಾಂತಿ ತೊಲಗಿ) ನಿಜದ ಅರಿವಾಯಿತು.
  11. throw off reserve
    1. ಸಂಕೋಚ ಬಿಡು.
    2. ಬಿಗುಮಾನ ಬಿಡು.
  12. we are off now ಇಗೋ ಹೊರಟವು; ಇನ್ನೇನು ಹೊರಟೆವು.
See also 1off  3off  4off
2off ಆಹ್‍
ಉಪಸರ್ಗ
    1. -ಇಂದ; (ಒಂದರಿಂದ) ದೂರಕ್ಕೆ; ಕೆಳಕ್ಕೆ; ಆಚೆ(ಗೆ) ಯಾ ಮೇಲಕ್ಕೆ: drove them off the seas ಅವರನ್ನು ಸಮುದ್ರದಿಂದಾಚೆ (ದೂರಕ್ಕೆ) ಅಟ್ಟಿದರು. fell off a ladder ಏಣಿಯಿಂದ (ಕೆಳಕ್ಕೆ)ಬಿದ್ದ. eats off silver plate ಬೆಳ್ಳಿಯ ತಟ್ಟೆಯಲ್ಲಿ ಊಟ ಮಡುತ್ತಾನೆ.
    2. ಆಚೆ(ಗೆ); ಒಳಗಲ್ಲದೆ: jumped off the edge ಏಣಿನಿಂದಾಚೆಗೆ ನೆಗೆದ. was already off the pitch ಆಟದ ಮೈದಾನದಿಂದ ಆಗಲೇ ಆಚೆ ಇದ್ದ.
    1. (ತಾತ್ಕಾಲಿಕವಾಗಿ) ಬಿಡುವು ಪಡೆದ; ಮಾಡದಿರದ; ತೊಡಗಿರದ: off duty ಕೆಲಸದಿಂದ ಬಿಡುವು ಪಡೆದಿರುವ; ಕೆಲಸದಲ್ಲಿ ತೊಡಗಿರದ.
    2. ಸದ್ಯಕ್ಕೆ ಇಚ್ಛೆಯಿಲ್ಲದೆ, ಆಕರ್ಷಿತನಾಗದೆ: off smoking ಧೂಮಪಾನ ಇಚ್ಛಿಸದೆ.
    3. (ಯಾವುದೇ ಕೆಲಸದಲ್ಲಿ ತನ್ನ) ಅತ್ಯುತ್ತಮ ಸಾಧನೆ ತೋರದೆ: off form ಉತ್ತಮ ಸ್ಥಿತಿಯಲ್ಲಿರದೆ; ಸಾಧನೆ ತೋರಿಸುವ ಒಳ್ಳೆಯ ಸ್ಥಿತಿಯಲ್ಲಿ ಇಲ್ಲದೆ.
  1. ಅವಲಂಬಿಸಿ; ಆಧರಿಸಿ; ಆಧಾರದ ಮೇಲೆ; ಮೂಲವಾಗಿ ಯಾ ಆಶ್ರಯವಾಗಿ ಬಳಸಿಕೊಂಡು: live off the land ಜಮೀನನ್ನು ಅವಲಂಬಿಸಿ, ಜಮೀನಿನ ಆಧಾರದ ಮೇಲೆ–ಬದುಕು.
  2. ಪ್ರಾರಂಭವಾಗುವ ಯಾ ದೂರವಿಲ್ಲದ: a street off the market ಮಾರುಕಟ್ಟೆಯಿಂದ ಪ್ರಾರಂಭವಾಗುವ ಯಾ ದೂರದಲ್ಲಿರದ ರಸ್ತೆ.
  3. ಸಮುದ್ರಕ್ಕೆ ಸಮೀಪದಲ್ಲಿ, ಹತ್ತಿರವಾಗಿ, ಅನತಿದೂರದಲ್ಲಿ: sank off Madras ಮದ್ರಾಸಿನ ಸಮುದ್ರ ತೀರದ ಹತ್ತಿರದಲ್ಲಿ ಮುಳುಗಿತು.
  4. ತುಸು; ಪೂರ್ತಿಯಲ್ಲದೆ: off white ತುಸು ಬಿಳಿಯ; ಕಂದು ಯಾ ಹಳದಿ ಛಾಯೆಯ.
  5. (ಉಡುಪಿನ ವಿಷಯದಲ್ಲಿ) ಮುಚ್ಚದ; ಕವಿಯದ: off the shoulders ಹೆಗಲು ಮುಚ್ಚದ.
  6. ಸದ್ಯದಲ್ಲಿ ಅನುಸರಿಸಬೇಕಾಗಿಲ್ಲದ; ನಿಲ್ಲಿಸಿದ; ಬಿಟ್ಟ; ಪಾಲಿಸದ: off my diet ಪಥ್ಯ ಸದ್ಯಕ್ಕೆ ನಿಲ್ಲಿಸಿದ್ದೇನೆ.
ಪದಗುಚ್ಛ
  1. carry (or sweep) person off his feet ವ್ಯಕ್ತಿಯನ್ನು ಹುರುಪುಗೊಳಿಸು, ಹುರುದುಂಬಿಸು ಯಾ ಉದ್ರೇಕಿಸು.
  2. off one’s feet (ಆಡುಮಾತು) ನಿಲ್ಲಲಾಗದ ಸ್ಥಿತಿಗೆ: was run off my feet with jobs to do ಮಾಡಬೇಕಾದ ಕೆಲಸಗಳಿಂದ ಒಂದು ಕಡೆಯಲ್ಲಿ ನಿಲ್ಲಲಾರದೆ ಹೋದ.
  3. off the peg (ಉಡುಪಿನ ವಿಷಯದಲ್ಲಿ) ಸಿದ್ಧ(ಪಡಿಸಿದ); ಹೊಲಿದು ತಯಾರಿಸಿದ.
  4. off the point
    1. ಅಪ್ರಕೃತ; ಅಪ್ರಸಕ್ತ; ಪ್ರಕೃತ ವಿಷಯಕ್ಕೆ ಸಂಬಂಧಿಸದ.
    2. ಅಪ್ರಕೃತವಾಗಿ; ಪ್ರಕೃತ ವಿಷಯಕ್ಕೆ ಸಂಬಂಧಿಸದೆ.
See also 1off  2off  4off
3off ಆಹ್‍
ಗುಣವಾಚಕ
  1. ಹೆಚ್ಚು ದೂರದ; ದೂರದ; ಆಚೆಯ: the off side of the wall ಗೋಡೆಯ ಆಚೆಯ ಕಡೆಯ.
  2. (ವಾಹನ, ಕುದುರೆ, ಮೊದಲಾದ ಪ್ರಾಣಿ ಅಥವಾ ರಸ್ತೆಯ ವಿಷಯದಲ್ಲಿ) ಬಲಗಡೆಯ: the off leader ಬಲಗಡೆಯ ಮುಂದಾಳು. the off front wheel ಬಲಗಡೆಯ ಮುಂಗಾಲಿ. the off hind leg ಬಲಗಡೆಯ ಹಿಂಗಾಲು.
  3. (ಕ್ರಿಕೆಟ್‍) ಆಹ್‍; ಬ್ಯಾಟುಗಾರನ ಬಲಗಡೆಯ (on, leg ಗಳಿಗೆ ವಿರುದ್ಧ ಪದ): an off drive ಬಲಗಡೆಯ ಹೊಡೆತ; ಚೆಂಡು ಬ್ಯಾಟುಗಾರನ ಬಲಭಾಗಕ್ಕೆ (ಹೋಗುವಂತೆ) ಹೊಡೆದ ಹೊಡೆತ.
  4. ಅಧೀನ; ಅಪ್ರಧಾನ; ಗೌಣ: that is an off issue ಆ ವಾದ ಗೌಣವಾದದ್ದು.
  5. ಕವಲೊಡೆಯುವ; ದಿಕ್ಕು ತಿರುಗುವ: an off street (ಹೆಬ್ಬೀದಿಯಿಂದ) ಕವಲೊಡೆದ ಬೀದಿ.
  6. ಕಡಮೆ ಸಂದರ್ಭದ; ಅತ್ಯಲ್ಪ ಸಂಭವದ: there is an off chance ಅದು ಆಗುವ ಸಂಭವ ಅತ್ಯಲ್ಪ.
  7. ಬಿಡುವಾದ: will do it on my next off day ನನಗೆ ಸಿಕ್ಕುವ ಮುಂದಿನ ಬಿಡುದಿನ ಅದನ್ನು ಮಾಡುತ್ತೇನೆ.
See also 1off  2off  3off
4off ಆಹ್‍
ನಾಮವಾಚಕ
  1. (ಕ್ರಿಕೆಟ್‍) ಮೈದಾನದಲ್ಲಿ (ಬ್ಯಾಟುಗಾರನ ದೃಷ್ಟಿಯಿಂದ) ಬಲಭಾಗ; ‘ಆಹ್‍’.
  2. ಕುದುರೆ ಪಂದ್ಯದ ಪ್ರಾರಂಭ, ಶುರು.