of ಆವ್‍, ಅವ್‍
ಉಪಸರ್ಗ

ಈ ಕೆಳಗೆ ವರ್ಗೀಕರಿಸಿರುವಂತೆ, ಅದರ ಮುಂದಿನ ನಾಮಪದವನ್ನು (ಯಾ ಸರ್ವನಾಮವನ್ನು) ಹಿಂದೆ ಬಂದಿರುವ ನಾಮಪದ, ವಿಶೇಷಣ, ಕ್ರಿಯಾವಿಶೇಷಣ ಯಾ ಕ್ರಿಯಾಪದಕ್ಕೆ ಅನ್ವಯಿಸಿ ಅವುಗಳ ಸಂಬಂಧಗಳನ್ನು ಸೂಚಿಸುವ ಉಪಸರ್ಗ ಪ್ರಯೋಗದ ಸಂದರ್ಭಗಳು:

    1. ಹುಟ್ಟು; ಮೂಲ; ಉಗಮ ಸ್ಥಾನ: be of ವಂಶದವನಾಗಿರು. come of descend of ವಂಶದಲ್ಲಿ ಹುಟ್ಟಿರು. spring of ... ಇಂದ ಹುಟ್ಟು, ಉದ್ಭವಿಸು.
    2. (ವ್ಯಕ್ತಿ ಮೊದಲಾದವರಿಂದ) ಬಂದದ್ದು; ಪಡೆದದ್ದು: borrow of ಸಾಲ ತೆಗೆದುಕೊ. buy of (ಒಬ್ಬನಿಂದ) ಕೊಂಡುಕೊ. win of (ಒಬ್ಬನಿಂದ) ಗೆದ್ದುಕೊ. receive of ಕೊಡುಗೆಯಾಗಿ ತೆಗೆದುಕೊ; ಕೊಟ್ಟದ್ದನ್ನು ಸ್ವೀಕರಿಸು. hire of ಬಾಡಿಗೆಗೆ ತೆಗೆದುಕೊ.
    3. ಕಾರಣ; ಹೇತು; ಕಾರಕ ಶಕ್ತಿ; ಪ್ರೇರಕ (ವ್ಯಕ್ತಿ ಯಾ ಮೂಲ): die of (ರೋಗ ಮೊದಲಾದವುಗಳಿಂದ) ಸಾಯು. sick of measles ದಡಾರದಿಂದ ಹಾಸಿಗೆ ಹಿಡಿದು. sick of delays ವಿಳಂಬದಿಂದ ಬೇಸರವುಂಟಾಗಿ. warned of God ದೇವರಿಂದಲೇ ಎಚ್ಚರಿಸಲ್ಪಟ್ಟು, ಎಚ್ಚರಿಕೆ ಪಡೆದು.
    4. ಕರ್ತೃ; ಯಾವುದನ್ನೇ ಮಾಡುವವನು ಯಾ ಉಂಟುಮಾಡುವವನು: paintings of Ravivarma ರವಿವರ್ಮ ರಚಿಸಿದ, ರವಿವರ್ಮನ ವರ್ಣಚಿತ್ರಗಳು.
  1. (ಒಂದು ವಸ್ತು ಮೊದಲಾದವು ಯಾವುದರಿಂದ ರಚಿತವಾಗಿದೆಯೋ ಆ) ಸಾಮಗ್ರಿ; ದ್ರವ್ಯ: built of brick ಇಟ್ಟಿಗೆಯಿಂದ ಕಟ್ಟಿದ. house of cards ಇಸ್ಪೀಟೆಲೆಗಳಿಂದ ನಿರ್ಮಿಸಿದ ಮನೆ. a family of eight ಎಂಟು ಜನರುಳ್ಳ ಯಾ ಜನರಿಂದ ಕೂಡಿದ ಕುಟುಂಬ.
  2. (ಒಬ್ಬನಿಗೆ, ಒಂದಕ್ಕೆ ಇರುವ) ಸಂಬಂಧದ; ಸೇರಿದ; ಸಂಬಂಧಿಸಿದ; ಸ್ವಾಮ್ಯದ: we, of the middle class ಮಧ್ಯಮ ವರ್ಗಕ್ಕೆ ಸೇರಿದ ನಾವು. companions of his exile ಅವನ ದೇಶಭ್ರಷ್ಟತೆಯ (ಕಾಲದ) ಒಡನಾಡಿಗಳು. articles of clothing ಉಡುಗೆತೊಡುಗೆಗಳ ಹಲವು ವಸ್ತುಗಳು. the manners of today ಇಂದಿನ ರೀತಿನೀತಿಗಳು. a thing of the past ಗತಕಾಲದ–ವಸ್ತು, ವಿಷಯ. the master of the house ಮನೆಯ ಯಜಮಾನ . the widow of the man who was killed ಹತನಾದವನ ವಿಧವೆ. a topic of conversation ಸಂಭಾಷಣೆಯ ಒಂದು ವಿಷಯ.
  3. (ತಾದಾತ್ಮ್ಯ ಯಾ ನಿಕಟ ಸಂಬಂಧ): the class of idiots ಮೂರ್ಖ ವರ್ಗ. a fool of a man ಮೂರ್ಖ ಮನುಷ್ಯ. her scamp of a husband ಅವಳ ಗಂಡನೆನಿಸಿಕೊಂಡಿರುವ ಅಯೋಗ್ಯ. the worst liar of any man I know ನನಗೆ ತಿಳಿದಿರುವವರಲ್ಲೆಲ್ಲ ಅತ್ಯಂತ ಸುಳ್ಳುಗಾರ. I had a bad time of it ಅದು ನನಗೆ ತುಂಬಾ ಕಷ್ಟ ಕೊಟ್ಟಿತು. I had a troublesome journey of it ಅದು ನನಗೆ ತೀರ ತೊಂದರೆಯ ಪ್ರಯಾಣವಾಗಿತ್ತು. the city of Rome ರೋಮ್‍ (ಎಂಬ) ನಗರ. the vice of drunkenness ಕುಡುಕುತನದ ಚಾಳಿ. a kilogram of apples ಒಂದು ಕಿಲೋ ಸೇಬು.
  4. (ಸಂಬಂಧವನ್ನು) ಕಳೆದು ಕೊಳ್ಳುವುದು; ತಪ್ಪಿಸಿಕೊಳ್ಳುವುದು; ನಿವಾರಿಸಿಕೊಳ್ಳುವುದು; ಪರಿಹರಿಸಿಕೊಳ್ಳುವುದು: heal of (ರೋಗ ಮೊದಲಾದವನ್ನು) ಪರಿಹರಿಸಿಕೊ. rid of, ನಿವಾರಿಸಿಕೊ. ease of (ಕಳೆದುಕೊಳ್ಳುವುದರ ಮೂಲಕ) ಸರಾಗ ಮಾಡಿಕೊ.
  5. (ಸಂಬಂಧ) ಇಲ್ಲದಿರುವುದು; (ಸಂಬಂಧದ) ರಾಹಿತ್ಯ; ಅಭಾವ: destitute of (ಯಾವುದೇ ವಸ್ತು ಯಾ ಏನೋ) ಇಲ್ಲದಿರು. empty of (ಏನೂ ಇಲ್ಲದೆ) ಖಾಲಿಯಗಿ. free of ವಿಮುಕ್ತವಾಗಿ. bare of ಶೂನ್ಯವಾಗಿ; ರಹಿತವಾಗಿ.
  6. (ಒಂದು ಸ್ಥಾನ ಬಿಟ್ಟು ಅಲ್ಲಿಂದ) ಯಾವುದೇ ದಿಕ್ಕಿನಲ್ಲಿರುವುದು ಯಾ ದೂರದಲ್ಲಿರುವುದು: north of ಉತ್ತರದಲ್ಲಿ; ಉತ್ತರಕ್ಕೆ, within a mile of ಒಂದು ಮೈಲಿಯೊಳಗೆ. upwards of ಮೇಲ್ಪಟ್ಟು. in front of ಮುಂದೆ; ಮುಂದುಗಡೆ, back of ಹಿಂದೆ; ಹಿಂದುಗಡೆ(ಯಲ್ಲಿ).
  7. (ಒಂದು ಸ್ಥಳವನ್ನು ಯಾ ಒಬ್ಬ ವ್ಯಕ್ತಿಯನ್ನು) ಅಗಲು; ಬಿಟ್ಟುಹೋಗು: take leave of ಅಗಲಿ ಹೋಗು; ಬೀಳ್ಕೊಳ್ಳು; ಬೀಳ್ಕೊಂಡು ಹೋಗು.
  8. (ಸಂಬಂಧ) ತಪ್ಪಿಸುವುದು; ತೊರೆಯುವುದು: baulk of (ಯಾವುದೇ ವಸ್ತು ಮೊದಲಾದವು ಸಿಕ್ಕದಂತೆ) ತಪ್ಪಿಸು; ಅಡ್ಡಿ ಪಡಿಸು; ತಡೆ. cheat, defraud of ಮೋಸದಿಂದ ಕಸಿದುಕೊ. deprive of (ಒಬ್ಬನ ವಸ್ತು, ಮೊದಲಾದವನ್ನು ಕಸಿದುಕೊಂದು ಅವನಿಗೆ) ಇಲ್ಲದಂತೆ ಮಾಡು. robbed us of Rs.1000 ನಮ್ಮಿಂದ ಒಂದು ಸಾವಿರ ರೂಪಾಯಿಗಳನ್ನು ಕಸಿದು ಕೊಂಡನು, ದರೋಡೆ ಮಾಡಿದನು. disappoint of (ನಿರೀಕ್ಷಿಸಿದ್ದು, ಬಯಸಿದ್ದು) ಸಿಕ್ಕದಂತೆ ಮಾಡು; ಆಶಾಭಂಗ ಮಾಡು.
  9. (ನಿರ್ದೇಶಿಸಿದ ಯಾ ಸೂಚ್ಯವಾಗಿರುವ) ಸಂಬಂಧ ಇಲ್ಲದಿರುವುದು: independently of ಆಶ್ರಿತ ಸಂಬಂಧವಿಲ್ಲದೆ; ಸ್ವತಂತ್ರವಾಗಿ. guiltless of ಅಪರಾಧ ಇಲ್ಲದಿರು; ನಿರಪರಾಧಿಯಾಗಿರು; ಅಪರಾಧ ವಿಮುಕ್ತನಾಗಿರು. irrespective of ಗಣನೆಗೆ ತೆಗೆದುಕೊಳ್ಳದೆ; ಲೆಕ್ಕಿಸದೆ; ನಿರಪೇಕ್ಷೆವಾಗಿ.
  10. (ವ್ಯಕ್ತಿಯನ್ನು ಯಾ ವಿಷಯವನ್ನು ಕುರಿತ) ಪ್ರಸ್ತಾಪ; ವಿಚಾರ; ಸಂಗತಿ; ಅಂಶ: think well of him ಅವನನ್ನು ಕುರಿತು ಒಳ್ಳೆಯ ಅಭಿಪ್ರಾಯ ತಳೆದಿರು. never heard of it ಅದರ ಮಾತನ್ನೇ ಎಂದೂ ಕೇಳಿರಲಿಲ್ಲ. was informed of the fact ಆ ಸಂಗತಿಯ ಸುದ್ದಿ ನನಗೆ ಮುಟ್ಟಿತು. this is true of every case ಪ್ರತಿಯೊಂದು ನಿದರ್ಶನದಲ್ಲೂ ಇದು ನಿಜ. repent of (ಯಾವುದೇ ತಪ್ಪಿಗಾಗಿ, ತಪ್ಪಿತಕ್ಕಾಗಿ, ಪಾಪಕ್ಕಾಗಿ) ಪಶ್ಚಾತ್ತಾಪಪಡು. beware of (ಯಾವುದೇ ಅಪಾಯದ ವಿಷಯದಲ್ಲಿ) ಎಚ್ಚರದಿಂದಿರು. cannot conceive of (ಅದನ್ನು) ಕಲ್ಪಿಸಿಕೊಳ್ಳಲಾರೆ. cannot accept of (ಅದನ್ನು) ಅಂಗೀಕರಿಸಲಾರೆ, ಒಪ್ಪಲಾರೆ. cannot approve of it ಅದನ್ನು ಅನುಮೋದಿಸಲಾರೆ. it does not admit (or allow) of such construction ಅದು ಅಂಥ ರಚನೆಗೆ ಎಡೆಗೊಡುವುದಿಲ್ಲ. convict of (ನಿರ್ದೇಶಿಸಿದ) ಅಪರಾಧ ಮಾಡಿದನೆಂದು ತೀರ್ಪು ಕೊಡು. suspect of (ಹೆಸರಿಸಿದ ತಪ್ಪಿತ ಒಬ್ಬನಲ್ಲಿ ಇದೆಯೆಂದು) ಸಂಶಯಪಡು; ಗುಮಾನಿ ಹೊಂದಿರು. bethink oneself of (ಯಾವುದೇ ವಿಷಯವನ್ನು) ನೆನಪಿಗೆ ತಂದುಕೊ; ಮನಸ್ಸಿಗೆ ತಂದುಕೊ. guilty of (ಹೆಸರಿಸಿದ) ತಪ್ಪು ಯಾ ತಪ್ಪಿತವುಳ್ಳ. certain, sure, confident of (ಒಂದು ವಿಷಯದಲ್ಲಿ) ಭರವಸೆಯುಳ್ಳ; ಖಾತರಿಯುಳ್ಳ; ನಂಬಿಕೆಯುಳ್ಳ. fond of (ಒಂದರ ಮೇಲೆ) ಇಷ್ಟ, ಪ್ರೀತಿ–ಉಳ್ಳ, swift of foot ಚುರುಕುಗಾಲಿನ; ವೇಗವಾಗಿ ನಡೆಯುವ ಯಾ ಓಡುವ. blind of an eye ಒಂದು ಕಣ್ಣು ಕುರುಡಾದ. at thirty years of age ಮೂವತ್ತು ವರ್ಷದ ವಯಸ್ಸಿನಲ್ಲಿ, very good of you ನಿಮ್ಮ ಸೌಜನ್ಯ. short of money ಹಣದ ಕೊರತೆಯಿರುವ. the selling of goods ಸರಕಿನ ಮಾರಾಟ.
  11. ಕರ್ಮಾರ್ಥಕ ಷಷ್ಠೀ ವಿಭಕ್ತಿ ಸಂಬಂಧ: the levying of taxes ತೆರಿಗೆಗಳನ್ನು ವಿಧಿಸುವಿಕೆ. love of virtue ಸದ್ಗುಣದ ಪ್ರೇಮ. in search of knowledge ಜ್ಞಾನದ ಅನ್ವೇಷಣೆಯಲ್ಲಿ. great eaters of pork ಹಂದಿಮಾಂಸದ ಮಹಾಭಕ್ಷಕರು; ಹಂದಿಮಾಂಸವನ್ನು ಹೆಚ್ಚಾಗಿ ತಿನ್ನುವವರು. redolent of (ಒಂದು ವಿಷಯದ) ಸೂಚಕವಾದ; ದ್ಯೋತಕವಾದ. productive of ಉತ್ಪಾದಿಸುವ; ಉತ್ಪಾದಕವಾದ. fruitful of (ಒಂದು ವಿಷಯದಲ್ಲಿ) ಫಲಪ್ರದವಾದ. lavish of ಉದಾರವಾದ; ಧಾರಾಳವಾದ. prodigal of ಅತಿ ಧಾರಳವಾದ; ದುಂದುಗೈಯ. sparing of ಮಿತವ್ಯಯದ. capable of ಒಂದು ವಿಷಯದಲ್ಲಿ–ಶಕ್ತನಾದ, ಸಮರ್ಥನಾದ. sensible of (ಒಂದು ವಿಷಯವನ್ನು) ತಿಳಿದಿರುವ; ಅರಿತಿರುವ. careful of (ಒಂದು ವಿಷಯದಲ್ಲಿ) ಎಚ್ಚರದಿಂದಿರುವ; ಜಾಗರೂಕ. observant of (ವಸ್ತುಗಳನ್ನು, ವಿಷಯಗಳನ್ನು) ಲಕ್ಷ್ಯವಿಟ್ಟು–ನೋಡುವ, ಗಮನಿಸುವ, ವೀಕ್ಷಿಸುವ. desirous of (ಯಾವುದನ್ನೇ) ಬಯಸುವ; ಇಚ್ಛಿಸುವ. impatient of (ಯಾವುದನ್ನೇ) ಸಹಿಸದ; (ಯಾವುದರದೇ ವಿಷಯದಲ್ಲಿ) ತಾಳ್ಮೆ ಗೆಟ್ಟ. characteristic of (ಒಬ್ಬನ, ಒಂದರ) ವಿಶಿಷ್ಟ ಲಕ್ಷಣವಾದ. destructive of (ಯಾವುದನ್ನೇ) ವಿನಾಶಗೊಳಿಸುವ; ಹಾಳುಗೆಡಹುವ. indicative of (ಒಂದು ವಿಷಯದ) ಸೂಚಕವಾದ. in search of (ಒಂದನ್ನು) ಅರಸುತ್ತಾ. love of (ಒಂದರ) ಪ್ರೀತಿ ಪ್ರೇಮ.
  12. (ವಸ್ತು ಮೊದಲಾದವುಗಳ) ವಿಭಾಗ ಮಾಡುವಿಕೆ; ವರ್ಗೀಕರಣ ಯಾ ಒಂದು ಗುಂಪಿನಲ್ಲಿ ಸೇರ್ಪಡೆ: no more of that ಆ ಮಾತುಸಾಕು, ಇನ್ನು ಹೆಚ್ಚು ಬೇಡ. some of us
    1. ನಮ್ಮಲ್ಲಿ ಕೆಲವರು.
    2. ನಾವು ಐವರು, the most dangerous of enemies ಶತ್ರುಗಳಲ್ಲೆಲ್ಲ ಅತ್ಯಂತ ಅಪಾಯಕಾರಿ. he of all men ಮನುಷ್ಯರಲ್ಲೆಲ್ಲ ಅವನು ಅತ್ಯಂತ ಹೆಚ್ಚಾಗಿ ಯಾ ಅತ್ಯಂತ ಕನಿಷ್ಠನಾಗಿ. it is the one thing of all that ಎಲ್ಲಕ್ಕಿಂತಲೂ ಅದೊಂದು ವಸ್ತು ಯಾ ವಿಷಯ ಇತ್ಯಾದಿ song of songs ಹಾಡುಗಳಲ್ಲಿ ಹಾಡು; ಅತ್ಯುತ್ತಮ ಗೀತ; ಎಲ್ಲಕ್ಕಿಂತ ಉತ್ತಮವಾದ ಹಾಡು. holy of holies ಪವಿತ್ರತಮ ಸ್ಥಾನ; ಪವಿತ್ರ ಸ್ಥಾನಗಳಲ್ಲಿ ಅತ್ಯಂತ ಪವಿತ್ರವಾದ ಸ್ಥಾನ. he is one of a thousand ಅವನು ಸಾವಿರ ಜನರಲ್ಲೊಬ್ಬ, ಸಾವಿರ ಜನಕ್ಕೊಬ್ಬ. a friend of mine ನನ್ನ ಸ್ನೇಹಿತರಲ್ಲೊಬ್ಬ. that long nose of his ಅವನ ಆ ಉದ್ದ ಮೂಗು. this only son of the professor ಪ್ರಾಧ್ಯಾಪಕನ ಒಬ್ಬನೇ ಮಗನಾದವನು. drink deep of flattery ಹೊಗಳಿಕೆಯನ್ನು ಚೆನ್ನಾಗಿ ಹೀರು partake of food ಸಹಭೋಜನ ಮಾಡು; ಒಡನೊಟ ಮಾಡು; (ಬೇರೊಬ್ಬರೊಡನೆ) ಊಟ ಮಾಡು; (ಬೇರೊಬ್ಬರನ್ನು ಅತಿಥಿಯಾಗಿ ಮಾಡಿಕೊಂಡು ಯಾ ಬೇರೊಬ್ಬರ ಅತಿಥಿಯಾಗಿ) ಭೋಜನ ಮಾಡು. he was sworn of the council ಆ ಸಭೆಯ, ಮಂಡಲಿಯ, ಸದಸ್ಯನಾಗಿ ಅವನು ಪ್ರಮಾಣ ವಚನ ಸ್ವೀಕರಿಸಿದ. his temper is of the quickest ಅವನ ಕೋಪ ಅತ್ಯಂತ ಶೀಘ್ರವಾದದ್ದು; ಅತ್ಯಂತ ಮುಂಗೋಪ ಅವನದು a sort of thud ಒಂದು ಗೆಯ ದೊಪ್ಪನೆಯ ಸದ್ದು. this sort of book ಈ ರೀತಿಯ ಪುಸ್ತಕ. some of us will stay ನಮ್ಮಲ್ಲಿ ಕೆಲವರು ಉಳಿದುಕೊಳ್ಳುತ್ತೇವೆ.
  13. (ವ್ಯಕ್ತಿಯ ವಸ್ತುವಿನ) ವರ್ಣನೆ; ಗುಣ; ಸ್ಥಿತಿ: man of tact ವ್ಯವಹಾರ ಕುಶಲ(ನಾದ) ವ್ಯಕ್ತಿ. person of consequence ಪ್ರಾಮುಖ್ಯವುಳ್ಳ ವ್ಯಕ್ತಿ; ಪ್ರಮುಖವ್ಯಕ್ತಿ, farm of 100 acres ನೂರು ಎಕರೆಯ ಹೊಲ. the hour of prayer ಪ್ರಾರ್ಥನಾ ಸಮಯ; ಪ್ರಾರ್ಥನೆಯ ಗಂಟೆ, ವೇಳೆ potatoes of our own growing ನಾವೇ ಬೆಳೆದ ಆಲೂಗೆಡ್ಡೆ, girl of ten years (old) ಹತ್ತು ವರ್ಷದ, ಹತ್ತು ವರ್ಷ ವಯಸ್ಸಿನ ಹುಡುಗಿ. on the point of leaving ಹೊರಡುವುದರಲ್ಲಿದ್ದ.
  14. (ಅಮೆರಿಕನ್‍ ಪ್ರಯೋಗ) ಮುಂದಿನ ಗಂಟೆಗೆ ಸಂಬಧಿಸಿದಂತೆ ಸಮಯ: a quarter of three ಮೂರಕ್ಕೆ ಕಾಲುಗಂಟೆ ಮುಂಚೆ (ಎರಡೂ ಮುಕ್ಕಾಲು ಗಂಟೆಗೆ).
ಪದಗುಚ್ಛ
  1. be of ಹೊಂದಿರು; ಪಡೆದಿರು; ಉಳ್ಳದ್ದಾಗಿರು: be of importance, interest value ಪ್ರಾಮುಖ್ಯ, ಆಸಕ್ತಿ, ಮೌಲ್ಯ–ಉಳ್ಳದ್ದಾಗಿರು, ಪಡೆದಿರು.
  2. brought to bed of (ತಾಯಿಯ ವಿಷಯದಲ್ಲಿ) ಹೆರು; ಪ್ರಸವಿಸು.
  3. hard of heart ಕಠಿಣ ಹೃದಯದ.
  4. have comfort of (ಒಂದರಿಂದ) ಸಮಾಧಾನಪಡೆ.
  5. of all ಎಲ್ಲರಲ್ಲಿ (ಯಾವುದೋ ಒಂದು ಸಾಧ್ಯವೇ ಇಲ್ಲ ಎನ್ನುವಲ್ಲಿ): you of all people ಎಲ್ಲರಲ್ಲಿ ನೀನು (ಹೀಗೆ ಮಾಡಬಹುದೇ ಇತ್ಯಾದಿ).
  6. of all the nerve (or cheek etc.) (ಒಬ್ಬ ವ್ಯಕ್ತಿತ ಉದ್ದಟತನವನ್ನು ನೋಡಿ ಕೋಪ ವ್ಯಕ್ತಪಡಿಸುವಾಗ ಮಾಡುವ ಉದ್ಗಾರ) ಅವನ ಧೈರ್ಯ ನೋಡು.
  7. of an evening (or morning etc.)
    1. ಬಹುತೇಕ ಯಾ ಬಹು ಮಟ್ಟಿನ ಸಾಯಂಕಾಲಗಳಲ್ಲಿ (ಯಾ ಪಾತ್ರಃಕಾಲ ಗಳಲ್ಲಿ ಮೊದಲಾದ)
    2. ಸಾಯಂಕಾಲಗಳಲ್ಲಿ (ಯಾ ಪ್ರಾತಃಕಾಲಗಳಲ್ಲಿ ಮೊದಲಾದ) ಯಾವಾಗಲೋ.