odyssey ಆಡಿಸಿ
ನಾಮವಾಚಕ
(ಬಹುವಚನ odysseys).
  1. (Odyssey) ಆಡಿಸಿ; ಓಡಿಸಿ; ಟ್ರಾಯ್‍ ಮುತ್ತಿಗೆಯಿಂದ ಇಥಾಕಾಗೆ ಹಿಂದಿರುಗುವಾಗ ಓಡಿಸೀಯಸ್‍ ಯಾ ಯೂಲಿಸಿಸ್‍ ಎಂಬ ವೀರನಿಗೆ ಸಂಭವಿಸಿದ ಅದ್ಭುತ ಘಟನೆಗಳನ್ನೂ ಅವನ ಮಹಾಸಾಹಸಗಳನ್ನು ನಿರೂಪಿಸುವ ಹೋಮರ್‍ ಕವಿಯ ಪುರಾತನ ಗ್ರೀಕ್‍ ಮಹಾಕಾವ್ಯ.
  2. (Odyssey) ಓಡಿಸಿ ಮಹಾಕಾವ್ಯದ 24 ಕಾಂಡಗಳಲ್ಲೊಂದು: in the fourth Odessey ನಾಲ್ಕನೆಯ ಓಡಿಸಿಯಲ್ಲಿ; ಓಡಿಸಿಯ ನಾಲ್ಕನೆಯ ಕಾಂಡದಲ್ಲಿ.
  3. ಸಾಹಸದ ಅಲೆದಾಟ ಯಾ ದೀರ್ಘಯಾತ್ರೆ; ಅಲೆದಾಟಗಳ ಪರಂಪರೆ; ಸಾಹಸಗಳಿಂದ ಕೂಡಿದ ದೀರ್ಘಯಾತ್ರೆ: a spiritual odyssey ಒಂದು ಆಧ್ಯಾತ್ಮಿಕ ಸಾಹಸಯಾತ್ರೆ.