odds ಆಡ್ಸ್‍
ನಾಮವಾಚಕ

(ಬಹುವಚನ)

  1. (ಎರಡೂ ಕಡೆಗೂ ಇರುವ ನಿರೀಕ್ಷಿತ ಸಂಭಾವ್ಯತೆಯನ್ನು ಅವಲಂಬಿಸಿ, ಪಂಥಗಾರರು ಒಡ್ಡುವ) ಪಣದ ಅನುಪಾತ ಯಾ ಅದರ ಪ್ರಮಾಣ: give (or lay) odds of three to one ಒಂದಕ್ಕೆ ಮೂರರಷ್ಟು (ಪಣ) ಒಡ್ಡು.
  2. ಹೆಚ್ಚು ಸಂಭವ; ಅಧಿಕ ಸಂಭಾವ್ಯತೆ; ಯಾವುದೇ ಪರಿಣಾಮ ಆಗುವ ಅಸಂಭವನೀಯತೆಗಿಂತ ಇರುವ ಹೆಚ್ಚಿನ ಸಂಭವನೀಯತೆ: the odds are that he will do it ಅವನು ಅದನ್ನು ಮಾಡುವ ಸಂಭವವೇ ಹೆಚ್ಚು: the odds are that it will rain ಮಳೆಯಾಗುವ ಸಂಭವವೇ ಹೆಚ್ಚು.
  3. ಪ್ರತಿಕೂಲಕ್ಕಿಂತ ಹೆಚ್ಚಿನ ಅನುಕೂಲ; the odds are in oue favour ನಮಗೆ ಪ್ರತಿಕೂಲವೇ ಹೆಚ್ಚಾಗಿದೆ. I have fought against longer odds ಇದಕ್ಕಿಂತ ಹೆಚ್ಚಿನ ಪ್ರತಿಕೂಲಗಳನ್ನು ಎದುರಿಸಿದ್ದೇನೆ (ಎಂದರೆ ಈಗ ಪ್ರತಿಕೂಲ ಅಷ್ಟೇನೂ ಹೆಚ್ಚಿಲ್ಲ), won the against all the adds ಎಲ್ಲ ಪ್ರತಿಕೂಲಗಳಿದ್ದರೂ, ಎಲ್ಲ ಪ್ರತಿಕೂಲಗಳ ವಿರುದ್ಧ ಗೆದ್ದ. the adds are against him ಅವನು ಗೆಲ್ಲುವ ಸಾಧ್ಯತೆ ಕಡಮೆ.
  4. (ಸ್ಪರ್ಧಿಗಳಲ್ಲಿ ದುರ್ಬಲನಾದವನಿಗೆ ಇತರರೊಡನೆ ಸಮ ಅವಕಾಶ ಕಲ್ಪಿಸಿಕೊಡಲು ನೀಡುವ) ರಿಯಾಯಿತಿ: give adds(ದುರ್ಬಲ ಸ್ಪರ್ಧಿಗೆ) ರಿಯಾಯಿತಿ ನೀಡಿ ಸಮಾವಕಾಶ ಕಲ್ಪಿಸಿಕೊಡು.
  5. (ಅನುಕೂಲಕರ) ವ್ಯತ್ಯಾಸ: what is the adds? ಅದರಿಂದೇನು? ಅದರಿಂದೇನು ತೊಂದರೆ? it makes no adds ಅದರಿಂದ ಏನೂ ವ್ಯತ್ಯಾಸವಾಗದು.
  6. (ಪ್ರಾಚೀನ ಪ್ರಯೋಗ) ಹೆಚ್ಚುಕಡಮೆ; ವೈಷಮ್ಯ; ಅಸಮತೆ: make adds even ಹೆಚ್ಚು ಕಡಿಮೆ ಇಲ್ಲದಂತೆ ಮಾಡು; ಸರಿಸಮ ಮಾಡು.
  7. ವಿರೋಧ; ಹೋರಾಟ; ಪ್ರತಿಕೂಲ: they are at adds with fate ಅವರು ವಿಧಿಯೊಡನೆ, ಅದೃಷ್ಟದೊಡನೆ ಹೋರಾಡುತ್ತಿದ್ದಾರೆ.
ಪದಗುಚ್ಛ
  1. at adds
    1. ವಿರುದ್ದವಾಗಿ.
    2. ಅಸಮಂಜಸವಾಗಿ; ಹೊಂದಾಣಿಕೆಯಿಲ್ಲದೆ.
  2. by all adds ಖಂಡಿತವಾಗಿ; ನಿಶ್ಚಯವಾಗಿ.
  3. adds and ends ಚೂರುಪಾರು; ಉಳಿಕೆಪಳಿಕೆ; ಚಿಲ್ಲರೆಪಲ್ಲರೆ.
  4. over the adds ಒಟ್ಟಿನಲ್ಲಿ ಒಪ್ಪಿದ ಬೆಲೆ ಮೊದಲಾದವುಗಳಿಗಿಂತ ಹೆಚ್ಚಾಗಿ.
  5. take adds ಇನ್ನೊಬ್ಬನಿಗೆ ಅನನುಕೂಲವಾಗುವಂತೆ ಪಣವೊಡ್ಡು; ಇನ್ನೊಬ್ಬನಿಗಿಂತ ಕಡಮೆ ಪಣವೊಡ್ಡು.