octopus ಆಕ್ಟಪಸ್‍
ನಾಮವಾಚಕ

(ಬಹುವಚನ octopuses).

  1. ಆಕ್ಟಪಸ್‍; ಅಷ್ಟಪಾದಿ:
    1. ಬಾಯಿಯ ಸುತ್ತಲೂ ಚೂಷ್ಮಾಂಗಗಳುಳ್ಳ ಎಂಟು ಉದ್ದವಾದ ಬಾಹುಗಳಿರುವ; ಆಕ್ಟಪೊಡ ಗಣಕ್ಕೆ ಸೇರಿದ ಮೃದುವಾದ ಚೀಲದಂಥ ದೇಹವುಳ್ಳ, ಬಲವಾದ ಕೊಕ್ಕಿನಂಥ ದವಡೆಗಳುಳ್ಳ, ಅಪಾಯಕಾರಿಯಾದ, ಶೀರ್ಷಪಾದಿ ಕಡಲಜೀವಿಗಳ ಕುಲ. Figure: Octopus-1
    2. ಈ ಕುಲಕ್ಕೆ ಸೇರಿದ ಶೀರ್ಷಪಾದಿ ಚಿಪ್ಪುಜೀವಿ, ಮೃದ್ವಂಗಿ
  2. ಸಂಹತಾಧಿಕಾರ ಯಾ ಸಂಘಟಿತ ಪ್ರಭಾವ; ಸಂಘಟಿತವಾದ, ಬಹುಮುಖವಾದ, ಸಾಮಾನ್ಯವಾಗಿ ಹಾನಿಕರವಾದ–ಅಧಿಕಾರ ಯಾ ಪ್ರಭಾವ.