octet ಆಕ್‍ಟೆಟ್‍
ನಾಮವಾಚಕ
  1. (ಸಂಗೀತ)
    1. ಅಷ್ಟಕ ಕೃತಿ; ಎಂಟು ಗಾಯಕರು ಹಾಡಲು ಯಾ ಎಂಟು ವಾದಕರು ನುಡಿಸಲು ರಚಿಸಿದ ಕೃತಿ.
    2. ಎಂಟು ಗಾಯಕರು ಯಾ ಎಂಟು ವಾದಕರು; ಅಷ್ಟಕ ಕೃತಿಯನ್ನು ಹಾಡುವ ಯಾ ನುಡಿಸುವ ಗಾಯಕರು ಯಾ ವಾದಕರು.
  2. ಅಷ್ಟಕ; ಎಂಟು; ಎಂಟರ ಗುಂಪು , ತಂಡ.
  3. ಅಷ್ಟಕ; ಪಂಕ್ತ್ಯಷ್ಟಕ; ಸಾನೆಟ್ಟಿನ ಮೊದಲ ಎಂಟು ಪಂಕ್ತಿಗಳು.
  4. (ರಸಾಯನವಿಜ್ಞಾನ) ಅಷ್ಟಕ; ಪರಮಾಣುವಿನ ಅತ್ಯಂತ ಹೊರ ಚಿಪ್ಪಿನಲ್ಲಿ ರೂಪುಗೊಂಡಾಗ ಸ್ಥಿರತೆ ಒದಗಿ ರಾಸಾಯನಿಕ ಸಂತೃಪ್ತಿ ಉಂಟಾಗುವುದೆಂದು ಪರಿಗಣಿಸಲಾಗಿರುವ ಎಂಟು ಇಲೆಕ್ಟ್ರಾನುಗಳ ತಂಡ.