octave ಆಕ್ಟಿ(ಕ್ಟೇ)ವ್‍
ನಾಮವಾಚಕ
  1. (ಸಂಗೀತ)
    1. ಅಷ್ಟಮ ಶ್ರೇಣಿ; ಸ್ವರಾಷ್ಟಕ ಶ್ರೇಣಿ; ಗೊತ್ತಾದ ಒಂದು ಸ್ವರದ ಮೇಲಿನ ಯಾ ಕೆಳಗಿನ ಸ್ಥಾಯಿಯ, ಆ ಸ್ವರದ ಕಂಪನ ಪ್ರಮಾಣಕ್ಕೆ ಎರಡರಷ್ಟು ಯಾ ಅರ್ಧದಷ್ಟು ಇರುವ, ಎಂಟು ಸ್ವರಗಳ ಶ್ರೇಣಿ.
    2. ಅಷ್ಟಕ; ಸ್ವರಾಷ್ಟಕಾಂತರ; ಒಂದು ಸ್ವರಕ್ಕೂ ಅದರ ಅಷ್ಟಮಕ್ಕೂ ನಡುವಣ ಅಂತರ.
    3. ಅಷ್ಟಮ; ಸ್ವರಾಷ್ಟಕಾಂತರದ ಅಂತ್ಯಗಳಲ್ಲಿ ಬರುವ ಎರಡು ಸ್ವರಗಳಲ್ಲಿ ಒಂದು.
    4. ಅಷ್ಟಮ ಯುಗ್ಮ; ಒಂದು ಸ್ವರ ಮತ್ತು ಅದರ ಅಷ್ಟಮ ಎರಡನ್ನೂ ಮೇಳೈಸಿ ಹಾಡುವುದು ಯಾ ವಾದನ ಮಾಡುವುದು.
  2. ಅಷ್ಟಪದಿ; ಪದ್ಯದಲ್ಲಿ ಎಂಟು ಸಾಲುಗಳ ಸಮುದಾಯ ಯಾ ಎಂಟು ಸಾಲುಗಳುಳ್ಳ ಪದ್ಯ.
  3. ಅಷ್ಟದಿನ; ಅಷ್ಟಾಹ; ಹಬ್ಬದ ದಿನದಿಂದ ತೊಡಗಿದ ವಾರ ಮತ್ತು ಅದರ ಮಾರನೆಯ ಎಂಟನೆಯ ದಿನವೂ ಸೇರಿದ ಎಂಟು ದಿನಗಳು.
  4. ಅಷ್ಟಕ; ಎಂಟರ ಗುಂಪು, ತಂಡ.
  5. ಅಷ್ಟಮ ತಂತ್ರ; ಖಡ್ಗ ವಿದ್ಯೆಯ ಎಂಟು ರಕ್ಷಕ ವರಿಸೆಗಳಲ್ಲಿ ಕೊನೆಯ ವರಿಸೆ.
  6. (ಬ್ರಿಟಿಷ್‍ ಪ್ರಯೋಗ) ಸುಮಾರು $13 \frac{ 1}/{ 2}$ ಗ್ಯಾಲನ್‍ ಹಿಡಿಸುವ ವೈನಿನ ಪೀಪಾಯಿ.