octant ಆಕ್‍ಟ(ಟ್‍)ಂಟ್‍
ನಾಮವಾಚಕ

ಅಷ್ಟಾಂಶಕ:

  1. ವರ್ತುಲದ ಪರಿಧಿಯಲ್ಲಿ ಎಂಟನೆಯ ಒಂದು ಭಾಗದಷ್ಟಿರುವ ಕಂಸ.
  2. ವರ್ತುಲದಲ್ಲಿ ಪರಸ್ಪರ 45 ಡಿಗ್ರಿ ಕೋನದಲ್ಲಿರುವ ಎರಡು ತ್ರಿಜ್ಯಗಳಿಂದ ಮತ್ತು ಆ ತ್ರಿಜ್ಯಗಳ ತುದಿಗಳನ್ನು ಸೇರಿಸುವ ಕಂಸದಲ್ಲಿ ಆವೃತವಾದ (ವರ್ತುಲದ ವಿಸ್ತೀರ್ಣದ) ಎಂಟನೆಯ ಒಂದು ಭಾಗ.
  3. ಮುಖ್ಯವಾಗಿ ಪರಸ್ಪರ ಲಂಬವಾಗಿರುವ ಮೂರು ಸಮತಲಗಳು ತಾವು ಸಂಧಿಸುವ ಬಿಂದುವಿನ ಸುತ್ತಲ ಪ್ರದೇಶವನ್ನು ಯಾ ಘನಕಾಯವನ್ನು ವಿಭಾಗಿಸುವ ಎಂಟು ಪ್ರದೇಶಗಳಲ್ಲಿ ಒಂದು.
  4. (ಖಗೋಳ ವಿಜ್ಞಾನ) ಅಷ್ಟಕ; ಬೇರೊಂದು ಖಗೋಳ ಕಾಯಕ್ಕೆ ಸಂಬಂಧಿಸಿದಂತೆ ಖಗೋಳ ಕಾಯವೊಂದು 45 ಡಿಗ್ರಿ ಅಂತರದಲ್ಲಿರುವಾಗಿನ ಅದರ ಸ್ಥಾನ.
  5. ಹಡಗಿನಿಂದ ಯಾ ವಿಮಾನದಿಂದ ಖಗೋಳ ಕಾಯಗಳ ಔನ್ನತ್ಯವನ್ನು ಅಳೆಯುವುದಕ್ಕಾಗಿ ಉಪಯೋಗಿಸುವ, ಪ್ರತಿಫಲನ ಕನ್ನಡಿಗಳ ನಡುವೆ ಗರಿಷ್ಠ 45 ಡಿಗ್ರಿ ಕೋನವುಳ್ಳ ಒಂದು ಸಾಧನ.