ocean ಓಷ(ಷ್‍)ನ್‍
ನಾಮವಾಚಕ
  1. ಸಾಗರ; ಸಮುದ್ರ; ಭೂಗೋಳಶಾಸ್ತ್ರಜ್ಞರು ಪ್ರಪಂಚದ ಜಲರಾಶಿಯನ್ನು ವಿಭಾಗಿಸಿ ಹೆಸರಿಸಿರುವ (ಅಟ್ಲಂಟಿಕ್‍, ಪೆಸಿಹಿಕ್‍, ಇಂಡಿಯನ್‍, ಆರ್ಕ್‍ಟಿಕ್‍ ಮತ್ತು ಅಂಟಾರ್ಕ್‍ಟಿಕ್‍) ಭಾಗಗಳಲ್ಲೊಂದು.
  2. (ಭೂ ಮಂಡಲದ ಭೂಪ್ರದೇಶವನ್ನೆಲ್ಲ ಬಳಸಿಕೊಂಡಿರುವ) ವಿಶಾಲ ಸಾಗರ.
  3. (ಕಾವ್ಯಪ್ರಯೋಗ) ಕಡಲು; ಸಮುದ್ರ; ಸಾಗರ: the dark unfathomed caves of ocean ಕಡಲಿನ ಆಳವರಿಯದ ಕಗ್ಗವಿಗಳು.
  4. (ರೂಪಕವಾಗಿ) (ಬಹುವಚನದಲ್ಲಿ) ಅಪಾರ ವಿಸ್ತಾರ; ಅಪರಿಮಿತ ರಾಶಿ: oceans of time ಕಾಲದ ಅಪಾರ ವಿಸ್ತಾರ, ಅನಂತ ವೈಶಾಲ್ಯ.
ಪದಗುಚ್ಛ
  1. German ocean = North Sea.
  2. ocean greyhound ವೇಗದಿಂದ ಚಲಿಸುವ (ಮುಖ್ಯವಾಗಿ ಪ್ರಯಾಣಿಕರ) ಹಡಗು.
  3. ocean lane (ಜಹಜುಗಳ ಸಂಚಾರಕ್ಕಾಗಿ ಗೊತ್ತುಪಡಿಸಿರುವ) ಸಾಗರಮಾರ್ಗ; ಕಡಲಹಾದಿ; ಸಮುದ್ರಪಥ.