occur ಅಕರ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ occurred, ವರ್ತಮಾನ ಕೃದಂತ occurring).
  1. (ಒಂದು ಸ್ಥಳದಲ್ಲಿ ಯಾ ಯಾವುದೋ ಪರಿಸ್ಥಿತಿಯಲ್ಲಿ) ಇರು; ಸಿಗು; ಸಿಕ್ಕು; ದೊರೆ; ದೊರಕು.
  2. (ಯಾವಾಗಲಾದರೂ) ನಡೆ; ಆಗು; ಸಂಭವಿಸು; ಘಟಿಸು.
  3. (ಮುಖ್ಯವಾಗಿ ಅನಿರೀಕ್ಷಿತವಾಗಿ ಯಾ ಸಾಂದರ್ಭಿಕವಾಗಿ) ಮನಸ್ಸಿಗೆ–ಬರು, ತೋರು, ಹೊಳೆ: it occurred to me that you were right ನೀನು (ನಿನ್ನ ವಾದ, ಅಭಿಪ್ರಾಯ, ಮೊದಲಾದವು) ಸರಿ ಎಂದು ನನಗೆ ಹೊಳೆಯಿತು.