occupation ಆಕ್ಯುಪೇಷ(ಷ್‍)ನ್‍
ನಾಮವಾಚಕ
  1. (ಒಬ್ಬನ ಶಕ್ತಿ ಗಮನಗಳನ್ನೆಲ್ಲ ಸೆಳೆದುಕೊಳ್ಳುವ, ಒಬ್ಬನ ಕಾಲವನ್ನೆಲ್ಲ ಸೆಳೆದುಕೊಳ್ಳುವ, ಒಬ್ಬನ ಕಾಲವನ್ನೆಲ್ಲ ಹಿಡಿಯುವ) ಕೆಲಸ; ಹವ್ಯಾಸ.
  2. ಉದ್ಯೋಗ; ವೃತ್ತಿ; ಕಸಬು; ಕೆಲಸ; ಒಬ್ಬನು ಜೀವನೋಪಾಯಕ್ಕಾಗಿ ಅನುಸರಿಸುವ ತಾತ್ಕಾಲಿಕ ಯಾ ಕಾಯಂ ಆದ, ಉದ್ಯೋಗ.
  3. ಆಕ್ರಮಣ; ಸ್ವಾಧೀನ: (ಮುಖ್ಯವಾಗಿ ಸೈನಿಕ ಬಲದಿಂದ ಒಂದು ದೇಶ ಯಾ ಪ್ರದೇಶವನ್ನು) ವಶಪಡಿಸಿಕೊಳ್ಳುವುದು ಯಾ ವಶದಲ್ಲಿ ಹೊಂದಿರುವುದು.
    1. ಆಕ್ರಮಣ; ಆಕ್ರಮಿಸಿರುವಿಕೆ.
    2. ಆಕ್ರಾಂತವಾಗಿರುವಿಕೆ.
    3. ಆಕ್ರಮಣದ ಸ್ಥಿತಿ ಯಾ ಕಾಲ.
  4. ಆಸ್ತಿಯ (ಮುಖ್ಯವಾಗಿ ಜಮೀನಿನ)–ಸ್ವಾಮ್ಯ, ಹಿಡುವಳಿ, ಅನುಭವ ಯಾ ಸುಪರ್ದು.
ಪದಗುಚ್ಛ
  1. army of occupation ಆಕ್ರಮಣ ಸೈನ್ಯ; ಆಕ್ರಮಿತ ಪ್ರದೇಶದಲ್ಲಿ ವ್ಯವಸ್ಥಿತ ಸರ್ಕಾರ ಸ್ಥಾಪಿತವಾಗುವವರೆಗೂ ಅಲ್ಲಿ ಬೀಡುಬಿಟ್ಟಿರುವ ಸೈನ್ಯ.
  2. occupation bridge, road, etc., ಹಿಡುವಳಿ ಸೇತುವೆ, ರಸ್ತೆ, ಮೊದಲಾದವು; ಹಿಡುವಳಿದಾರನ ಸ್ವಂತ ಉಪಯೋಗಕ್ಕಾಗಿ ಮಾತ್ರ ನಿರ್ಮಿಸಿರುವ ಖಾಸಗಿ ಸೇತುವೆ, ರಸ್ತೆ, ಮೊದಲಾದವು.
  3. occupation franchise (ಬ್ರಿಟಿಷ್‍ ಪ್ರಯೋಗ) ಹಿಡುವಳಿ ವೋಟು; ಒಕ್ಕಲು ಮತ; ಹಿಡುವಳಿಕೆಯಿಂದ ಹಿಡಿವಳಿದಾರನಾಗಿರುವುದರಿಂದ ಪಡೆದ ವೋಟಿನ ಹಕ್ಕು.