occupant ಆಕ್ಯುಪಂಟ್‍
ಗುಣವಾಚಕ
  1. (ಒಂದು ಸ್ಥಳದಲ್ಲಿ)
    1. ಇರುವವನು; ನೆಲಸಿಗ.
    2. (ನಿ)ವಾಸಿ; ಒಕ್ಕಲಿರುವವನು; ವಾಸಿಗ; ವಾಸಿಸುತ್ತಿರುವವನು: both occupants of the car were unhurt ಕಾರಿನಲ್ಲಿದ್ದ ಇಬ್ಬರಿಗೂ ಗಾಯವಾಗಲಿಲ್ಲ.
  2. ಆಸ್ತಿಯ (ಮುಖ್ಯವಾಗಿ ಜಮೀನಿನ)– ಒಕ್ಕಲು ಹಿಡುವಳಿದಾರ, ಅನುಭವದಾರ.
  3. ಸ್ವಾಮ್ಯಸಾಧಕ; ಯಾರ ಒಡೆತನಕ್ಕೂ ಸೇರಿಲ್ಲದ ವಸ್ತುವನ್ನು ವಶಪಡಿಸಿಕೊಂಡು ಅದರ ಮೇಲೆ ತನ್ನ ಹಕ್ಕನ್ನು ಸಾಧಿಸಿಕೊಳ್ಳುವವನು.