occasionalism ಅಕೇಷನಲಿಸಂಮ್‍
ನಾಮವಾಚಕ

(ತತ್ತ್ವಶಾಸ್ತ್ರ) ಸಾಂದರ್ಭಿಕ ವಾದ; ಮನಸ್ಸು ಮತ್ತು ಭೌತ ದ್ರವ್ಯ ಪರಸ್ಪರ ಕ್ರಿಯೆಯಲ್ಲಿ ತೊಡಗುವುದಿಲ್ಲ, ಆದರೆ ಒಂದು ಕ್ಷೇತ್ರದಲ್ಲಿನ ಘಟನೆಗೆ ಸಂವಾದಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ಘಟನೆ ನಡೆಯುತ್ತದೆ (ಉದಾಹರಣೆಗೆ ಮನಸ್ಸಿನಲ್ಲಿ ಶಬ್ದದ ಕಲ್ಪನೆ ಉದಯಿಸಿದಾಗ ಹೊರಗಡೆಯ ಭೌತ ಪ್ರಪಂಚದಲ್ಲಿ ಶಬ್ದ ಉಂಟಾಗಿರುತ್ತದೆ), ಇದು ಹೀಗಿರುವಂತೆ ಮಾಡುವವನು ದೇವರು ಎಂದು ಪ್ರತಿಪಾದಿಸುವ ಕಾರ್ಟೀಸಿಯನ್‍ ತಾತ್ತ್ವಿಕರ ಸಿದ್ಧಾಂತ; ಮನಸ್ಸಂಕಲ್ಪ ಮತ್ತು ಇಂದ್ರಿಯ ಸಂವೇದನೆಗಳಿಗೂ ಅವುಗಳಿಗೆ ಮುಂಚೆ ಮತ್ತು ಅವುಗಳ ತರುವಾಯ ಸಂಭವಿಸುವ ಭೌತ ವಿದ್ಯಮಾನಗಳಿಗೂ ಇರುವ ಸಂಬಂಧ ಕಾರ್ಯಕಾರಣ ಸಂಬಂಧವಲ್ಲ, ಆದರೆ ಬೇರೆ ಬೇರೆ ಘಟನೆಗಳಾಗಿ ಅವು ಒಂದೇ ಸಂದರ್ಭದಲ್ಲಿ ಭಗವಂತನಿಂದ ಸ್ಪಷ್ಟವಾಗುವುದರಿಂದ ಅವುಗಳ ಸಂಬಂಧವು ಸಾಮಯಿಕ ಸಂಯೋಗ ಸಂಬಂಧವೆಂದು ಪ್ರತಿಪಾದಿಸುವ ಕಾರ್ಟೀಷಿಯನ್‍ ತಾತ್ತ್ವಿಕರ ಸಿದ್ಧಾಂತ.