occasional ಅಕೇಷನ(ನ್‍)ಲ್‍
ಗುಣವಾಚಕ
  1. ಸಾಂದರ್ಭಿಕ:
    1. ವಿಶೇಷ ಸಂದರ್ಭದಿಂದ(ಗಳಿಂದ) ಹುಟ್ಟಿದ, ಜನಿಸಿದ, ಸಂಭವಿಸಿದ.
    2. ವಿಶೇಷ ಸಂದರ್ಭಕ್ಕಾಗಿ–ಮಾಡಿದ ಯಾ ಉದ್ದೇಶಿಸಿದ.
    3. ವಿಶೇಷ ಸಂದರ್ಭದಲ್ಲಿ ಬಳಸಲು ಹೊಂದಿಸಿದ.
    4. ವಿಶೇಷ ಸಂದರ್ಭಕ್ಕೆ ಸಂಬಂಧಿಸಿದ.
    5. ವಿಶೇಷ ಸಂದರ್ಭದಲ್ಲಿ ಕೆಲಸ ಮಾಡುವ, ಕಾರ್ಯಕಾರಿಯಾಗುವ.
  2. ಆಕಸ್ಮಿಕ; ನಿಯತ ಕ್ರಮವಿಲ್ಲದೆ ಆಗುವ, ಸಂಭವಿಸುವ.
  3. ಸಾಂದರ್ಭಿಕ; ಸಂದರ್ಭಾನುಸಾರವಾದ; ಸಮಯಾನುಸಾರವಾದ; ಪರಿಸ್ಥಿತಿ ಒದಗಿದಾಗ ಅದಕ್ಕೆ ತಕ್ಕುದಾದ.
  4. ಪ್ರಾಸಂಗಿಕವಾದ; ಆಗೊಮ್ಮೆ ಈಗೊಮ್ಮೆ ಸಂಭವಿಸುವ; ನಿಯತವಾಗಿ ಯಾ ಪದೇ ಪದೇ ಸಂಭವಿಸದ.