See also 2occasion
1occasion ಅಕೇಷ(ಷ್‍)ನ್‍
ನಾಮವಾಚಕ
    1. ವಿಶೇಷ–ಘಟನೆ, ಸಂದರ್ಭ; ವಿಶೇಷವಾದ ಯಾ ಗಮನಾರ್ಹವಾದ–ಪರಿಸ್ಥಿತಿ, ಸಂದರ್ಭ: dressed for the occasion ಸಂದರ್ಭಕ್ಕೆ ತಕ್ಕಂತೆ ವೇಷ ತೊಟ್ಟ; ಸಂದರ್ಭೋಚಿತವಾದ ಪೋಷಾಕು ಧರಿಸಿದ. on this festive occasion ಈ ಉತ್ಸವ ಸಂದರ್ಭದಲ್ಲಿ.
    2. ವಿಶೇಷ ಸಮಯ, ಸಂದರ್ಭ; ವಿಶೇಷ ಸಂಗತಿ ಯಾ ಘಟನೆ ನಡೆಯುವ ನಿರ್ದಿಷ್ಟ ಸಮಯ: on the occasion of their marriage ಮದುವೆಯ ಸಮಯದಲ್ಲಿ, ಸಂದರ್ಭದಲ್ಲಿ.
  1. ಕಾರಣ; ಸಮರ್ಥನೆ; ಆಧಾರ: there is no occasion to be angry ಕೋಪಿಸಿಕೊಳ್ಳಲು ಕಾರಣವೇನೂ ಇಲ್ಲ.
  2. ಸುಸಮಯ; ಸುಸಂದರ್ಭ; ಸದವಕಾಶ; ಯಾವುದೇ ಕೆಲಸ ಮಾಡಲು ತಕ್ಕ–ಸಮಯ, ಸಂದರ್ಭ, ಅವಕಾಶ: take occasion (ಮಾಡಲು) ಅವಕಾಶವನ್ನು ಪಡೆದುಕೊ, ಉಪಯೋಗಿಸಿಕೊ.
  3. ಗೌಣ, ಪ್ರಾಸಂಗಿಕ–ಕಾರಣ; ಸದ್ಯಃ ಕಾರಣ; ತತ್‍ಕ್ಷಣದ, ಆದರೆ ಗೌಣವಾದ ಯಾ ಪ್ರಾಸಂಗಿಕವಾದ ಕಾರಣ: the cause of revolution may be obscure while its occasion is obvious ಕ್ರಾಂತಿಯ ಪ್ರಾಸಂಗಿಕ ಕಾರಣ ಸ್ಪಷ್ಟವಾಗಿದ್ದರೂ ಅದರ ಮೂಲ ಕಾರಣವು ಗೂಢವಾಗಿರಬಹುದು. the assassination was the occasion of the war ಖೂನಿಯು ಯುದ್ಧಕ್ಕೆ ಪ್ರಾಸಂಗಿಕ ಕಾರಣವಾಗಿತ್ತು.
  4. ಪ್ರೇರಕ (ಕಾರಣ); ಪ್ರೇರಣೆ: gave occasion to a burst of laughter ಗೊಳ್ಳೆಂದು ನಗಲು ಕಾರಣವಾಯಿತು.
  5. ಅಗತ್ಯ; ಆವಶ್ಯಕತೆ: the Queen has no occasion for the services of the officer ರಾಣಿಯವರಿಗೆ (ಈ) ಅಧಿಕಾರಿಯ ಸೇವೆಯ ಅಗತ್ಯವಿಲ್ಲ (ಅವನನ್ನು ವಜಾ ಮಾಡಲು ಬಳಸುವ ಸೌಮ್ಯ ಸೂತ್ರ).
  6. (ಬಹುವಚನದಲ್ಲಿ) ವ್ಯವಹಾರಗಳು; ಕೆಲಸಕಾರ್ಯಗಳು; ವೃತ್ತಿಗೆ ಸಂಬಂಧಿಸಿದ ಕಾರ್ಯಕಲಾಪಗಳು: go about one’s lawful occasions ತನ್ನ ನ್ಯಾಯಬದ್ಧ ವ್ಯವಹಾರಗಳಲ್ಲಿ ನಿರತನಾಗಿರು; ತನಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುತ್ತಿರು.
ಪದಗುಚ್ಛ
  1. celebrate the occasion ಸಂದರ್ಭವನ್ನು ಉತ್ಸವರೂಪದಲ್ಲಿ ಆಚರಿಸು.
  2. rise to the occasion ಅಸಾಧಾರಣ ಸಂದರ್ಭವೊದಗಿದಾಗ ಅದಕ್ಕೆ ತಕ್ಕ ಯಾ ಅಗತ್ಯವಾದ ಇಚ್ಚಾಶಕ್ತಿ, ಬಲ, ಸಾಮರ್ಥ್ಯ, ಮೊದಲಾದವನ್ನು ತೋರಿಸು, ಪ್ರದರ್ಶಿಸು.
  3. take occasion ಅವಕಾಶ ಬಳಸಿಕೊ; ಸದವಕಾಶವನ್ನು ಉಪಯೋಗಿಸಿಕೊ.
  4. (up)on occasion
    1. ಆಗಾಗ್ಗೆ; ಒಮ್ಮೊಮ್ಮೆ: ಆಗೊಮ್ಮೆ ಈಗೊಮ್ಮೆ.
    2. ಅಗತ್ಯ ಬಿದ್ದಾಗಲೆಲ್ಲ.
See also 1occasion
2occasion ಅಕೇಷ(ಷ್‍)ನ್‍
ಸಕರ್ಮಕ ಕ್ರಿಯಾಪದ
  1. (ಆಗಲು) ಅವಕಾಶ ಕಲ್ಪಿಸು; ಸಂದರ್ಭ ಯಾ ಸನ್ನಿವೇಶ ಒದಗಿಸು.
  2. ಕಾರಣವಾಗು; ಕಾರಣವಾಗಿ ಉಂಟು ಮಾಡು.
  3. (ಸಂದರ್ಭಾನುಸಾರವಾಗಿ) ಆಗುವಂತೆ ಮಾಡು; ಆಗಿಸು; ಉಂಟುಮಾಡು.
  4. (ವ್ಯಕ್ತಿಯನ್ನು ಯಾ ಯಂತ್ರ ಮೊದಲಾದವನ್ನು ಒಂದು ಕೆಲಸ) ಮಾಡುವಂತೆ ಮಾಡು; ಕೆಲಸಕ್ಕೆ ಪ್ರೇರಿಸು.