See also 2obverse
1obverse ಆಬ್‍ವರ್ಸ್‍
ನಾಮವಾಚಕ
    1. ಶಿರೋಭಾಗ; (ನಾದಲ್ಲಿ ಯಾ ಫಲಕದಲ್ಲಿ ತಲೆ ಯಾ ಪ್ರಧಾನ ಲಾಂಛನ ಇರುವ) ಮೇಲ್ಮುಖ; ಮುಮ್ಮುಖ.
    2. ಈ ಮುಮ್ಮುಖದ ಮೇಲಿನ ಚಿತ್ರ ಯಾ ಲಾಂಛನ.
  1. (ಒಂದು ವಸ್ತುವಿನ) ಮುಂದುಗಡೆಯ ಯಾ ಮೇಲುಗಡೆಯ ಯಾ ಸರಿಯಾದ–ಮುಖ, ಮೇಲ್ಮೈ, ಮೇಲ್ಭಾಗ.
  2. (ಒಂದು ಸಂಗತಿಯ ಯಾ ಸತ್ಯಾಂಶದ) ವಿರುದ್ಧ; ಇನ್ನೊಂದು, ಬೇರೊಂದು, ಮತ್ತೊಂದು–ಮುಖ ಯಾ ಪಕ್ಕ.
  3. (ರೂಪಕವಾಗಿ) (ಪ್ರದರ್ಶಿಸುವ ಸಲುವಾಗಿ ಯೋಜಿತವಾದ) ಮುಂಭಾಗ; ಮುಖಭಾಗ; ಮುಮ್ಮುಖ.
  4. (ತರ್ಕಶಾಸ್ತ್ರ) ಪ್ರತಿವರ್ತಿತ ವಾಕ್ಯ; ಪ್ರತಿರೂಪ ಪ್ರತಿಜ್ಞೆ; ಗೃಹೀತವಾಕ್ಯದ ವಿಧೇಯ ಪದಕ್ಕೆ ಅದರ ವ್ಯಾಘಾತಕ ಪದವನ್ನು ಆದೇಶಿಸಿ ತನ್ಮೂಲಕ ಗೃಹೀತ ವಾಕ್ಯವನ್ನು ಗುಣಾಂತರಗೊಳಿಸಿ ಅನುಮಾನಿಸಿದ ಪ್ರತಿಜ್ಞಾವಾಕ್ಯ.
See also 1obverse
2obverse ಆಬ್‍ವರ್ಸ್‍
ಗುಣವಾಚಕ
  1. (ಜೀವವಿಜ್ಞಾನ) ಬುಡ ಕಿರಿದಾದ; ಸಂಕುಚಿತ ಮೂಲದ; ತುದಿಗಿಂತ ಬುಡವು ಯಾ ತಗುಲಿಕೊಂಡಿರುವ ಸ್ಥಾನವು ಕಿರಿದಾಗಿರುವ.
  2. (ಇನ್ನೊಂದಕ್ಕೆ) ಸಂವಾದಿಯಾಗಿರುವ; ಸರಿಸಾಟಿಯಾಗಿರುವ; ಪ್ರತಿರೂಪವಾಗಿರುವ.